ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ

ರಾಮದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಂದ ಸಮಾರಂಭದಲ್ಲಿ ಪಿಎಸ್​ಐ ಸವಿತಾ ಮುನ್ಯಾಳ ಮಾತನಾಡಿದರು. ಪ್ರದಿಪಕುಮಾರ ಪಟ್ಟಣ, ಆರ್​.ಪಿ.ಜಗತಾಪ, ಎಸ್​.ಜಿ.ಮಾಳವಾಡ ಇತರರಿದ್ದರು.
ರಾಮದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಂದ ಸಮಾರಂಭದಲ್ಲಿ ಪಿಎಸ್​ಐ ಸವಿತಾ ಮುನ್ಯಾಳ ಮಾತನಾಡಿದರು. ಪ್ರದಿಪಕುಮಾರ ಪಟ್ಟಣ, ಆರ್​.ಪಿ.ಜಗತಾಪ, ಎಸ್​.ಜಿ.ಮಾಳವಾಡ ಇತರರಿದ್ದರು.
Published on
ರಾಮದುರ್ಗ: ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಪಾಲ್ಗೊಂಡು, ತಮ್ಮ ಪ್ರತಿಭೆ ಗುರುತಿಸಿಕೊಂಡರೆ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಪಿಎಸ್​ಐ ಸವಿತಾ ಮುನ್ಯಾಳ ಹೇಳಿದರು.
ಪಟ್ಟಣದ ಶ್ರೀಮತಿ ಸುಶೀಲಾತಾಯಿ ವೈ ಕುಲಗೋಡ ಪಿಯು ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಿಳಾ ಸಂದ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆಯರಿಗೆ ಶಿಣ, ಆರೋಗ್ಯ, ಸುರತೆ, ಆತ್ಮವಿಶ್ವಾಸ, ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಒತ್ತು ನೀಡುವ ಹಲವು ಚಟುವಟಿಕೆಗಳು ಈ ಕಾಲೇಜಿನಲ್ಲಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿನಿಯರು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾ ಪ್ರಸಾರಕ ಸಮಿತಿಯ ಉಪಾಧ್ಯ ಪ್ರದಿಪಕುಮಾರ ಪಟ್ಟಣ, ವಿದ್ಯಾ ಪ್ರಸಾರಕ ಸಮಿತಿಯ ಗೌರವ ಕಾರ್ಯದರ್ಶಿ ಆರ್​.ಪಿ.ಜಗತಾಪ ಮಾತನಾಡಿದರು.
ವಿದ್ಯಾ ಪ್ರಸಾರಕ ಸಮಿತಿಯ ಸದಸ್ಯ ಎಸ್​.ಜಿ.ಮಾಳವಾಡ, ಎಸ್​.ಜಿ.ಚಿಕ್ಕೋಡಿ, ಎಸ್​.ಬಿ.ಸೊಬರದ, ಜಿಮಖಾನಾ ಉಪಾಧ್ಯ, ಆರ್​.ಸಿ.ತಡಗಣಿ, ಮಹಿಳಾ ಸಂದ ಕಾರ್ಯದರ್ಶಿ ಎಸ್​.ಆರ್​.ಗೋಲಣ್ಣನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net