26 ವರ್ಷ ಕಳೆದರೂ ಸಾರ್ವಜನಿಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಬ್ಲಾಕ್ ಡೇ ಆಚರಿಸಲಾಗುತ್ತಿದೆ. ಕೆಜಿಎಫ್ ಕ್ಷೇತ್ರದಲ್ಲಿ ಕುಡಿಯುವುದಕ್ಕೆ ಶುದ್ಧ ನೀರು ಇಲ್ಲ. ಬಿಜಿಎಂಎಲ್ ಭಾಗದಲ್ಲಿ ಕಾರ್ಮಿಕರು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಮಹಿಳೆಯರಿಗೆ ಶೌಚಗೃಹವಿಲ್ಲ, ಕುಡಿಯುವ ನೀರಿಲ್ಲ, ನಿವೃತ್ತಿ ಹಣ ಬಂದಿಲ್ಲ. ಕಾರ್ಮಿಕರಿಗೆ ವಾಸ ಮಾಡಲು ಯೋಗ್ಯ ಮನೆಯಿಲ್ಲ ಎಂದರು.