ಕಾಂಗ್ರೆಸ್​ ವೈಫಲ್ಯ ಮುಂದಿಟ್ಟುಕೊಂಡು ಚುನಾವಣೆ ಎದುರಿಸೋಣ / KUNDANA

ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಪ್ಪರದಕಲ್ಲು ಬಳಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಜೆಡಿಎಸ್​ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್​, ತಾಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ, ವಿಜಯಪುರ ಹೋಬಳಿ ಅಧ್ಯಕ್ಷ ಪುರ ಕೃಷ್ಣಪ್ಪ ಇದ್ದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಪ್ಪರದಕಲ್ಲು ಬಳಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಜೆಡಿಎಸ್​ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್​, ತಾಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ, ವಿಜಯಪುರ ಹೋಬಳಿ ಅಧ್ಯಕ್ಷ ಪುರ ಕೃಷ್ಣಪ್ಪ ಇದ್ದರು.
Published on
ಕುಂದಾಣ : ಕಾಂಗ್ರೆಸ್​ ವೈಫಲ್ಯ ಮುಂದಿಟ್ಟುಕೊಂಡು ಜನರ ಮನೆ ಬಾಗಿಲಿಗೆ ತೆರಳಿ ಅವರ ಕುಂದು ಕೊರತೆಗಳನ್ನು ಆಲಿಸುವುದಲ್ಲದೆ ಸ್ಥಳಿಯರ ಅಭಿವೃದ್ಧಿಗೆ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಪ್ಪರದಕಲ್ಲು ಬಳಿಯ ಮನ್ವಂತರಿ ಪಾರ್ಟಿಹಾಲ್​ನಲ್ಲಿ ಬುಧವಾರ ಜೆಡಿಎಸ್​ನಿಂದ ಹಮ್ಮಿಕೊಂಡಿದ್ದ ವಿಶೇಷ ಸಮಗ್ರ ಪರಿಷ್ಕರಣೆರ ಬಿಪಿಎಲ್​ 2 ಕಾರ್ಯಾಗಾರದಲ್ಲಿ ಮಾತನಾಡಿದರು. ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ, ತಾಪಂ, ಗ್ರಾಪಂ ಚುನಾವಣೆಗೆ ಸಜ್ಜುಗೊಳ್ಳಬೇಕು. ಹಾಗಾಗಿ ವರಿಷ್ಠರ ಆದೇಶದಂತೆ ತಾಲೂಕಿನ ಎಲ್ಲ ಬೂತ್​ಮಟ್ಟದ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಚುನಾವಣಾ ಸಿದ್ಧತಾ ಸಮಗ್ರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿನ ವೈಗಳ ಬಗ್ಗೆ ಎಚ್ಚರ ವಹಿಸಬೇಕು. ಈ ಹಿಂದೆ ಕೆಲ ಚುನಾವಣೆಗಳಲ್ಲಿ ಒಂದೇ ಮತದಲ್ಲಿ ಪರಾಭಾವಗೊಂಡ ಸ್ಥಿತಿಗಳನ್ನು ಎದುರಿಸಿದ್ದೇವೆ. ಕ್ಷೇತ್ರದ 294 ಬೂತ್​ಗಳಲ್ಲಿ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಎಚ್​.ಎನ್​. ದೇವರಾಜ್​ ಮಾತನಾಡಿ, ಚುನಾವಣಾ ಆಯೋಗದ ನಿಬಂಧನೆಗಳಿಗೆ ಕೈಗೊಳ್ಳಬಹುದಾದ ಮುಂಜಾಗ್ರತೆ ಹಾಗೂ ಮತದಾರರಲ್ಲಿ ಬರುವ ಗೊಂದಲಗಳಿಗೆ ಎಚ್ಚೆತ್ತು, ಅಗತ್ಯ ಸಿದ್ಧತೆ ಪಡೆದುಕೊಳ್ಳುವ ಬಗ್ಗೆ ಬೂತ್​ ಕಮಿಟಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಯುವ ಜೆಡಿಎಸ್​ ಮುಖಂಡ ಹೊಸಹಳ್ಳಿ ರವಿಕುಮಾರ್​, ಹಿರಿಯ ಮುಖಂಡರಾದ ಗುರ್ರಪ್ಪ, ಕುಂದಾಣ ಹೋಬಳಿ ಅಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್​, ಬೂತ್​ ಕಮಿಟಿ ಪದಾಧಿಕಾರಿಗಳಾದ ರಾಮಾಂಜಿನೇಯದಾಸ್​, ತೆಲೂಹಳ್ಳಿ ಶಿವಾನಂದ್​, ಸೂಲಕುಂಟೆ ಜಗದೀಶ್​, ರೆಡ್ಡಹಳ್ಳಿ ಚೇತನ್​ ಗೌಡ, ಹಂದ್ರಹಳ್ಳಿ ಬಾಬು, ಕೆಂಪತಿಮ್ಮನಹಳ್ಳಿ ಆನಂದ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net