ಕೂಡ ಭಾರತ ಎಐನ ಸೃಷ್ಟಿಕರ್ತ ಆಗಲಿ ಎಂದು ಆಶಯ ವ್ಯಕ್ತಪಡಿಸಿದ್ದು ಈ ಉದ್ದೇಶದಿಂದಲೇ. ಜಾಗತಿಕ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇಂದು ತಂತ್ರಜ್ಞಾನವೇ ಬ್ರಹ್ಮಾಸ್ತ›. ಆಯಾ ಕಾಲಘಟ್ಟದ ತಂತ್ರಜ್ಞಾನ, ಸಂಶೋಧನೆಗಳು ಮಾನವ ಸಮಾಜವನ್ನು ಬಹುವಾಗಿ ಬದಲಿಸಿವೆ ಮತ್ತು ಈಗಲೂ ಬದಲಿಸುತ್ತಿವೆ. ಎಐ ಆಧುನಿಕ ಮಾನವನ ಅಂಥದ್ದೊಂದು ಅಪರೂಪದ ಮತ್ತು ಕ್ರಾಂತಿಕಾರಿ ಸಂಶೋಧನೆಯಾಗಿದೆ. ಭವಿಷ್ಯ. ಗಾಳಿ, ನೀರು, ಬೆಳಕು, ಆಹಾರವಿಲ್ಲದೇ ಮನುಷ್ಯ ಹೇಗೆ ಬದುಕಲಾರನೋ, ಹಾಗೆಯೇ ಇನ್ನು ಮುಂದೆ ಮಾನವ ಎಐ ಇಲ್ಲದೇ ಬದುಕಲಾರ. ಎಐ ಕ್ರಾಂತಿ ಇಡೀ ಭೂಗೋಳವನ್ನು ಒಂದು ಕುಟುಂಬವಾಗಿ ಮಾಡಲಿದೆ. ಎಐ ಇಲ್ಲದ ಜೀವನ ಊಹಿಸಿಕೊಳ್ಳುವುದೂ ಕಷ್ಟಕರ. ಪರಿಸ್ಥಿತಿ ಹೀಗಿರುವಾಗ ನಾವು ನೀವೆಲ್ಲಾ ಬದಲಾವಣೆಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕೋಣ. ಹೊಸತರ ಬಗ್ಗೆ ತುಡಿತ ಬೆಳೆಸಿಕೊಳ್ಳೋಣ. ಆಗದು ಎಂದು ಕೈ ಚೆಲ್ಲಿ ಕುಳಿತುಕೊಳ್ಳುವ ಬದಲು ನಾವೂ ಅದಕ್ಕೆ ತಕ್ಕಂತೆ ಅಪಡೇಟ್ ಆಗೋಣ. ಹೆದರುವ ಅಗತ್ಯವೇ ಇಲ್ಲ. ಇವೆಲ್ಲಾ ನಮ್ಮ ಜ್ಞಾನ ಮತ್ತು ಕೌಶಲ ಅಭಿವೃದ್ಧಿಗೆ ಪೂರಕ ಎಂದುಕೊಂಡು ಸಕಾರಾತ್ಮಕವಾಗಿ ಸ್ವೀಕರಿಸೋಣ ಅಷ್ಟೇ.