Tumkur ತಿಪಟೂರು ನಗರದ ಸಿಡ್ಲೇಹಳ್ಳಿ ಸಂಸ್ಥಾನ ಮಠದ ಶ್ರೀ ಗುರುಕುಲಾನಂದಾಶ್ರಮದಲ್ಲಿ ಆಯೋಜಿಸಿದ್ದ ಚಿಂತನಾಗೋಷ್ಠಿಯಲ್ಲಿ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ, ಕಾನೂನು ಸೇವಾ ಸಮಿತಿ ಆಡಳಿತ ಸಹಾಯಕ ಡಾ.ಡಿ.ಅಶೋಕ್, ಸೇವಾಕರ್ತ ವೃತ್ತ ಶಿಕ್ಷಕ ನಿಟ್ಟೂರು ಸದಾಶಿವಯ್ಯ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಕರೆ
ತಿಪಟೂರು: ಶಿವಶರಣರು ಹಾಕಿಕೊಟ್ಟ ಪರಂಪರೆಯನ್ನು ಉಳಿಸಿ, Tumkur ಅರಿವು ಮೂಡಿಸಿ ಸಮಾನತೆಯ ಸಮಾಜವನ್ನು ನಿರ್ಮಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಸಿಡ್ಲೇಹಳ್ಳಿ ಸಂಸ್ಥಾನ ಮಠದ ಶ್ರೀ ಗುರುಕುಲಾನಂದಾಶ್ರಮದಲ್ಲಿ ಗುರುವಾರ ಆಯೋಜಿಸಿದ್ದ 347ನೇ ಬೆಳದಿಂಗಳ ಶರಣಧರ್ಮ ಚಿಂತನಾಗೋಷ್ಠಿಯಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲದಿದ್ದರೂ ಜನಸಾಮಾನ್ಯರು ಕೂಡ ತಮ್ಮ ಸತ್ಯ ಶುದ್ಧ ಕಾಯಕದ ಮೂಲಕ ಉತ್ತಮ ಬದುಕು ರೂಪಿಸಿಕೊಂಡು ಶರಣರಾಗಬಹುದಾಗಿತ್ತು. ಆದರೆ ಇಂದಿಗೂ ಶರಣರ ಆಶಯ ಈಡೇರಿಲ್ಲ. ಆದ್ದರಿಂದ ಶಿವಶರಣರು ಹಾಕಿಕೊಟ್ಟ ಪರಂಪರೆಯನ್ನು ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕಾನೂನು ಸೇವಾ ಸಮಿತಿ ಆಡಳಿತ ಸಹಾಯಕ ಡಾ.ಡಿ.ಅಶೋಕ್ ಮಾತನಾಡಿ, ಮಾನವರಲ್ಲಿ ಮಾನವೀಯತೆಯನ್ನು ಹುಟ್ಟುಹಾಕುವುದೇ ವಚನ ಸಾಹಿತ್ಯವಾಗಿದೆ. ಬಸವಣ್ಣ ಅವರು ಜಾತಿ, ಮತ, ಲಿಂಗಭೇದ ಇಲ್ಲದೆ ಸ್ತ್ರೀ&ಪುರುಷರು ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿ ಒಂದು ಆಂದೋಲನವನ್ನು ರೂಪಿಸಿದ್ದರು. ಬಸವಣ್ಣ ಅವರ ವಚನಗಳಲ್ಲಿನ ಬಹುಪಾಲು ತತ್ವಗಳು ಇಂದಿನ ಸಂವಿಧಾನದಲ್ಲಿ ಅಡಕವಾಗಿರುವುದನ್ನು ಕಾಣಬಹುದಾಗಿದೆ. ಯುವಜನಾಂಗ ತಮ್ಮ ಜೀವನದಲ್ಲಿ ಗುರಿಯಿಟ್ಟುಕೊಂಡು ಹಿಂದೆ ಗುರುವಿನ ಆಶೀರ್ವಾದ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.
ಸೇವಾಕರ್ತ ವೃತ್ತ ಶಿಕ್ಷಕ ನಿಟ್ಟೂರು ಸದಾಶಿವಯ್ಯ, ಶ್ರೀ ಗುರುಕುಲ ಸಹಕಾರ ಸಂಘದ ಅಧ್ಯಕ್ಷ * ಎಚ್.ಎಸ್.ಸಿದ್ಧರಾಮಯ್ಯ, ನಿವೃತ್ತ ಪ್ರಾಂಶುಪಾಲ ಬೆಟ್ಟಯ್ಯ ನಾಗರಾಜು, ವಿ.ಬಿಮಹಲಿಂಗಪ್ಪ, ನಿವೃತ್ತ ಸಬ್ಇನ್ಸ್ಪೆಕ್ಟರ್ ಮಹದೇವಪ್ಪ, ಸಂಯೋಜಕ ಡಾ.ವೆಂಕಟೇಶ್ ಇದ್ದರು.