

ಚನ್ನಪಟ್ಟಣ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಘಟಕದಿಂದ ಹರ್ ಘರ್ ತಿರಂಗಾ ಪ್ರಭಾತ್ ಫೇರಿ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಎಚ್. ಜೆ. ಚಂದ್ರು ನೇತ್ರತ್ವದಲ್ಲಿ ಹಾಗೂ ಪ್ರಾಂಶುಪಾಲೆ ಡಾ. ಉಷಾ ಮಾಲಿನಿ ಮಾರ್ಗದರ್ಶನದಲ್ಲಿ ಎನ್‌ಸಿಸಿ ಕೆಡೆಟ್‌ಗಳು ರಾಷ್ಟ್ರಧ್ವಜ ಹಿಡಿದುಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರಭಾತ್ ಫೇರಿಯಲ್ಲಿ ಭಾಗವಹಿಸಿದರು.