ಎಸ್‌ಟಿ ಮೀಸಲಾತಿಗೆ ಹೋರಾಡೋಣ

ಸಿಂದಗಿ ನಗರದಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದರು. ಬಂಡೆಪ್ಪ ಕಾಶೆಂಪೂರ, ಎ.ಎಂ. ಮನಗೂಳಿ, ರಮೇಶ ಭೂಸನೂರ ಮತ್ತಿತರರಿದ್ದರು.
ಸಿಂದಗಿ ನಗರದಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದರು. ಬಂಡೆಪ್ಪ ಕಾಶೆಂಪೂರ, ಎ.ಎಂ. ಮನಗೂಳಿ, ರಮೇಶ ಭೂಸನೂರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಕರೆ
  • ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ
  • ಪ್ರತಿಭಾ ಪುರಸ್ಕಾರ ಸಮಾರಂಭ
ಸಿಂದಗಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೇಂದ್ರಕ್ಕೆ ಸಮುದಾಯದ ಕುಲ ಶಾಸೀಯ ಅಧ್ಯಯನಕ್ಕಾಗಿ ವರದಿ ಸಲ್ಲಿಸಿದ್ದರೂ, ಕೇಂದ್ರ ಅದನ್ನು ಸ್ವೀಕರಿಸಿಲ್ಲ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಗುಂದಗಿ ಪಂಕ್ಷನ್ ಹಾಲ್‌ನಲ್ಲಿ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಮುದಾಯದ ಬಹು ವರ್ಷಗಳ ಬೇಡಿಕೆಯಾಗಿರುವ ಎಸ್ಟಿ ಮೀಸಲಾತಿ ಕುರಿತಂತೆ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಸಲ್ಲಿಸಿರುವ ವರದಿಯನ್ನು ಸ್ವೀಕರಿಸಿ ಮೀಸಲಾತಿಯನ್ನು ನೀಡುವ ತೀರ್ಮಾನ ಕೇಂದ್ರದ್ದಾಗಿದೆ. ಅದು ಇನ್ನೂ ನಿರ್ಧಾರಗೊಂಡಿಲ್ಲ. ಹೀಗಾಗಿ ನಾವು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ, ಮೀಸಲಾತಿಯನ್ನು ಪಡೆಯಲು ಸಂಘಟಿತರಾಗಿ, ಭವಿಷ್ಯದ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಸಿದ್ದರಾಮಯ್ಯನವರ ಸರ್ಕಾರ ಪಶುಭಾಗ್ಯ ಯೋಜನೆಯಡಿ ಕುರಿಗಾಹಿಗಳ ನೆರವಿಗೆ ಅನೇಕ ಸೌಲಭ್ಯಗಳನ್ನು ಜಾರಿ ತಂದಿದೆ. ಕುರಿ ಖರೀದಿ, ಸಬ್ಸಿಡಿ, ಪ್ರಾಣ ಹಾನಿ ವಿವಿಧ ಪರಿಹಾರ ಮತ್ತು ಪ್ರೋತ್ಸಾಹವನ್ನು ನೀಡಿದೆ. ಕ್ರಾಂತಿಕಾರಿ ರಾಯಣ್ಣನ ಜನ್ಮ ಸ್ಥಳ ಸಂಗೊಳ್ಳಿಯಲ್ಲಿ 67 ಕೋಟಿ ರೂ. ವೆಚ್ಚದ ಸ್ಮಾರಕ, ವಸ್ತು ಸಂಗ್ರಹಾಲಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಭಿವೃದ್ಧಿಗೊಳಿಸಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಸಮಾಜದ ಋಣವನ್ನು ತೀರಿಸಿ ಮಾದರಿ ಭವಿಷ್ಯ ರೂಪಿಸಿಕೊಳ್ಳಬೇಕು. ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಬೇಡಿಕೆಯಂತೆ, ನಗರದಲ್ಲಿ ಒಂದು ನಿವೇಶನ ಒದಗಿಸಲು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ನಿರ್ಣಯಿಸುವುದಾಗಿ ಭರವಸೆ ನೀಡಿದರು.
ಧಾರವಾಡದ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಮನ್ಸೂರ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಶಾಸಕ ಎ.ಎಂ. ಮನಗೂಳಿ, ರಾಜ್ಯ ಬಿಜೆಪಿ ಮುಖಂಡ ಶರಣು ತಳ್ಳಿಕೇರಿ, ಕಾಂತೇಶ ಕೆ.ಇ, ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಮಾತನಾಡಿ, ಸಿಂದಗಿ ನೆಲದಲ್ಲಿ ಕುರುಬ ಗೊಲ್ಲಾಳ, ಶರಣ ಬಸವಣ್ಣ, ಪದ್ಮರಾಜ ಒಡೆಯರು ನಮ್ಮ ಕುಲದ ಶಕ್ತಿ. ಸಮಾಜ ಸಂಘಟಿತವಾಗಬೇಕು. ರಾಯಣ್ಣನ ದೇಶಭಕ್ತಿಯನ್ನು ಸ್ಮರಿಸುತ್ತ, ಅವರ ಆದರ್ಶ ಮತ್ತು ದೇಶಪ್ರೇಮವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಕುವೆಂಪು ಭಾಷಾ ಭರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಚನ್ನಪ್ಪ ಕಟ್ಟಿ ಉಪನ್ಯಾಸ ನೀಡಿದರು. ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳು, ಕನ್ನಯ್ಯ ಮಹಾರಾಜರು, ಮಾಜಿ ಶಾಸಕ ರಮೇಶ ಭೂಸನೂರ, ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಮಲ್ಲಣ್ಣ ಸಾಲಿ, ನಾಗಪ್ಪ ಶಿವೂರ, ಪ್ರಕಾಶ ಹಿರೇಕುರುಬರ, ಎಸ್.ಕೆ. ಪೂಜಾರಿ, ಮಲ್ಲು ಸಾವಳಸಂಗ, ರಾಯಪ್ಪ ಇವಣಗಿ, ಶಿಲ್ಪಾ ಕುದರಗೊಂಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net