ರಾಷ್ಟ್ರೀಯ ಹಬ್ಬವನ್ನು ಸಂಭ್ರಮಿಸೋಣ

ಜೇವರ್ಗಿಯಲ್ಲಿ ತಹಸೀಲ್ದಾರ್​ ಅಂಜುಮ್​ ತಬಸ್ಸುಮ್​ ಧ್ವಜಾರೋಹಣ ನೆರವೇರಿಸಿದರು. ವೀರಣ್ಣ ಕೌಲಗಿ, ಬಾಪುಗೌಡ ಪಾಟೀಲ್​, ಶಂಭುಲಿಂಗ ದೇಸಾಯಿ ಇತರರಿದ್ದರು.
ಜೇವರ್ಗಿಯಲ್ಲಿ ತಹಸೀಲ್ದಾರ್​ ಅಂಜುಮ್​ ತಬಸ್ಸುಮ್​ ಧ್ವಜಾರೋಹಣ ನೆರವೇರಿಸಿದರು. ವೀರಣ್ಣ ಕೌಲಗಿ, ಬಾಪುಗೌಡ ಪಾಟೀಲ್​, ಶಂಭುಲಿಂಗ ದೇಸಾಯಿ ಇತರರಿದ್ದರು.
Published on

ಜೇವರ್ಗಿ: ಸ್ವಾತಂತ್ರ್ಯ ದಿನ ನಮ್ಮೆಲ್ಲರ ಹಬ್ಬವಾಗಿದೆ. ಅಸಂಖ್ಯ ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದ್ದು, ಇದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡೋಣ ಎಂದು ತಹಸೀಲ್ದಾರ್​ ಅಂಜುಮ್​ ತಬಸ್ಸುಮ್​ ಹೇಳಿದರು. ಮಿನಿ ವಿಧಾನಸೌದದಲ್ಲಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ತಾಪಂ ಇಒ ವೀರಣ್ಣ ಕೌಲಗಿ, ಸಿಪಿಐ ಬಾಪುಗೌಡ ಪಾಟೀಲ್​, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಪ್ರತಾಪ ಕಟ್ಟಿ, ಪ್ರಮುಖರಾದ ದಾನಪ್ಪಗೌಡ ಹಳಿಮನಿ, ಸತೀಶ ಸಂಗನ್​, ಡಾ.ಉಮೇಶ ಶರ್ಮಾ, ಚಂದ್ರಕಾಂತ ಜೀವಣಗಿ, ಸುಮಂಗಲಾ ಹೂಗಾರ, ಡಾ.ಶೋಭಾ ಸಜ್ಜನ್​, ಗಜಾನನ ಬಿರಾದಾರ, ಬಸವರಾಜ ತೇಲಕರ್​, ಹಳ್ಳೆಪ್ಪಾಚಾರ್ಯ ಜೋಶಿ, ರಾಜಶೇಖರ ಸೀರಿ, ವೀರೇಶ ಕಂದಗಲ್​, ಬೆಣ್ಣೆಪ್ಪ ಕೊಂಬಿನ್​, ಮಹಿಮೂದ್​ ನೂರಿ, ಸಂಗಮೇಶ ಕೊಂಬಿನ್​, ರವಿಚಂದ್ರ ಗುತ್ತೇದಾರ್​, ನಿಂಗಪ್ಪ ಪೂಜಾರಿ, ನಾಗರಾಜ ಹಾಲಗೂರ, ಬಸವರಾಜ ಲಾಡಿ, ಗುರುಶಾಂತಪ್ಪ ಚಿಂಚೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net