ಹಿಂದೂ ಎಂದು ಧೈರ್ಯದಿಂದ ಹೇಳೋಣ Hindu

ಹಿಂದೂ ಎಂದು ಧೈರ್ಯದಿಂದ ಹೇಳೋಣ Hindu
ಹಿಂದೂ ಎಂದು ಧೈರ್ಯದಿಂದ ಹೇಳೋಣ Hindu
Published on
ಬೇತಮಂಗಲ: ನಾನು ಹಿಂದೂ ಎಂದು ಧೈರ್ಯದಿಂದ ಹೇಳಬೇಕು. ಹಿಂದೂಗಳ ಸಂತತಿ ಬೆಳೆಸಬೇಕು. ಮತಾಂತರ ಆಗುವುದನ್ನು ತಪ್ಪಿಸಬೇಕು ಎಂದು ದಕ್ಷಿಣ ಭಾರತ ಪ್ರಾಂತ್ಯದ ಆರ್​ಎಸ್​ಎಸ್​ ಸಂಚಾಲಕ ಜಗದೀಶ್​ ತಿಳಿಸಿದರು.Hindu
ಕೆಜೆಎ್​ ತಾಲೂಕಿನ ಬೇತಮಂಗಲದ ಕ್ಯಾಸಂಬಳ್ಳಿಯಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿ, ಈ ಜಗತ್ತಿಗೆ ಹಿಂದೂಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಮುಸ್ಲಿಂರಾಗಲಿ, ಕ್ರಿಶ್ಚಿಯನ್ನರಾಗಲಿ ಯಾವುದೇ ಕೊಡುಗೆ ನೀಡಿಲ್ಲ. ನಾವು ನಾಲ್ಕು ವೇದ ನೀಡುವ ಮೂಲಕ ಅಪಾರ ಾನ ಹಂಚಿದ್ದೇವೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಮೂಲಕ ಾನ ಭಂಡಾರ ನೀಡಿದ್ದೇವೆ ಎಂದರು.
ನಾವುಗಳು ಸ್ವದೇಶಿ ನಿರ್ಮಿತ ವಸ್ತುಗಳ ಉತ್ಪಾದನೆ ಮತ್ತು ಖರೀದಿ ಮಾಡುವ ಸಂಕಲ್ಪ ಮಾಡಬೇಕಾಗಿದೆ. ಗ್ರಾಮ ಸ್ವರಾಜ್ಯ ಕನಸು ನನಸಾಗಬೇಕು. ನಮಗೆ ಕರ್ಮಭೂಮಿ, ಧರ್ಮಭೂಮಿ, ಜನ್ಮಭೂಮಿ ಎಲ್ಲವೂ ಭಾರತವೇ ಆಗಿದೆ. ಆದ್ದರಿಂದ ಹಿಂದೂ ಸಮಾಜ ಜಾಗೃತರಾಗಬೇಕು. ಹಿಂದುತ್ವವೆ ನಮ್ಮ ರಾಷ್ಟ್ರೀಯತೆ ಎಂದು ಹೇಳಿದರು.
ಬೆಲ್ಲನಪುರಿ ಮಹಾಂತೇಶ್​ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೈಸೂರು ರಾಜ್ಯದ ಪ್ರಥಮ ಸಿಎಂ ಕೆಸಿ ರೆಡ್ಡಿ ಹುಟ್ಟಿದ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಹಿಂದೂ ಸಮಾಜದ ಸಮಾರಂಭ ಅರ್ಥಪೂರ್ಣವಾಗಿದೆ. ನಮ್ಮ ಸಮಾಜ ಸನಾತನ ಕಾಲದಿಂದ ಇತ್ತು. ಈಗಲೂ ಇದೆ, ಮುಂದೆಯೂ ಇರುತ್ತದೆ ಎಂದರು.
ಖ್ಯಾತ ವೈದ್ಯ ಡಾ.ನಾಗಪ್ಪ ಮಾತನಾಡಿ, ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾತ್ರ ನಮ್ಮ ಪಾತ್ರ ಏನು ಎನ್ನುವುದು ತಿಳಿಯುತ್ತದೆ ಎಂದರು.
ಸಂಚಲನ ಮೂಡಿಸಿದ ಶೋಭಾಯಾತ್ರೆ: ಕಾರ್ಯಕ್ರಮಕ್ಕೂ ಮುಂಚೆ ಕೆಜಿಎಫ್​ ರಾಜಪೆಟ್​ ಮುಖ್ಯರಸ್ತೆಯಲ್ಲಿ ಶೋಭಾಯಾತ್ರೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕಳಶಗಳನ್ನು ಹೊತ್ತು ಹಿಂದೂಪರ ೂಷಣೆ ಕೂಗುತ್ತ ಹೆಜ್ಜೆ ಹಾಕಿದರು.
ರಸ್ತೆಯುದ್ದಕ್ಕೂ ಕೇಸರಿ ಬಾವುಟ, ತೋರಣಗಳು ಹಾಗೂ ದೊಡ್ಡ ್ಲೆಕ್ಸ್​, ಬ್ಯಾನರ್​ ರಾರಾಜಿಸಿದವು.
ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ, ಮಹದೇವಪುರ ಮೋಹನ ಕೃಷ್ಣ, ಮುನಿರತ್ನಂ ನಾಯ್ಡು, ಬಿಜೆಪಿ ಜಿಲ್ಲಾ ಉಪಾಧ್ಯ ಜಯಪ್ರಕಾಶ್​ ನಾಯ್ಡು, ಕಮಲನಾಥ್​, ನವೀನ್​ ನಾಯ್ಡು, ಟಿಎಪಿಎಂಸಿಎಸ್​ಎಸ್​ ಅಧ್ಯ ಪ್ರವಿಣ್​ ಕುಮಾರ್​, ಗ್ರಾಮಾಂತರ ಅಧ್ಯ ಲಕ್ಷಿ$್ಮನಾರಾಯಣ ಶರ್ಮ, ತೇಜ ವೆಂಕಟರಮಣ, ಎಸ್​.ಸಿ.ಮೋರ್ಚಾ ಅಧ್ಯ ಕೃಷ್ಣಮೂರ್ತಿ, ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಉಪಾಧ್ಯೆ ಗೀತಾ ವಿವೇಕಾನಂದ ರೆಡ್ಡಿ ಸರ್ಕಾರಿ ನೌಕರರ ಸಂದ ಮಾಜಿ ಅಧ್ಯ ರವಿರೆಡ್ಡಿ, ಮುಖಂಡ ಕೇಶವ, ಬುಜ್ಜಿ ನಾಯ್ಡು, ನವೀನ್​, ರಾಮ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net