ಗ್ಯಾರಂಟಿಗಳಿಂದ ಅರ್ಹರು ವಂಚಿತರಾಗದಿರಲಿ

ಬೀದರ್​ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಜಿಪಂ ಉಪ ಕಾರ್ಯದರ್ಶಿ ಶರಣಬಸಪ್ಪ ಕೋಟೆಪ್ಪಗೊಳ, ಕಿಶೋರ ದುಬೆ, ಪ್ರವಿಣ ಬರಗಲ್​, ಶ್ರೀಧರ, ರಮೇಶ ಪಾಟೀಲ್​ ಇತರರಿದ್ದರು.
ಬೀದರ್​ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಜಿಪಂ ಉಪ ಕಾರ್ಯದರ್ಶಿ ಶರಣಬಸಪ್ಪ ಕೋಟೆಪ್ಪಗೊಳ, ಕಿಶೋರ ದುಬೆ, ಪ್ರವಿಣ ಬರಗಲ್​, ಶ್ರೀಧರ, ರಮೇಶ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ ತಾಕೀತು
  • ಬೀದರ್​ನಲ್ಲಿ ಪ್ರಗತಿ ಪರಿಶೀಲನೆ
ಬೀದರ್​: ರಾಜ್ಯ ಸರ್ಕಾರದ ಮಹತ್ವಕಾಂ ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯ ಯಾವೊಬ್ಬ ಅರ್ಹ ಫಲಾನುಭವಿ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅರ್ಹ ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ ಸೌಲಭ್ಯ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಜಿಲ್ಲೆಯ ಎಲ್ಲ ಬಸ್​ ನಿಲ್ದಾಣಗಳಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆ ಬಗ್ಗೆ ಅನೇಕ ದೂರುಗಳು ಬರುತ್ತಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿ ಕ್ರಮ ವಹಿಸಬೇಕು. ಪಡಿತರ ಅಂಗಡಿಗಳಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುವುದರ ಜತೆಗೆ ಸಾಧ್ಯವಾದರೆ ಪಡಿತರ ವಿತರಿಸುವ ಸಮಯ ಬದಲಾಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ 345132 ಫಲಾನುಭವಿಗಳು ಗೃಹಲಕ್ಷಿ$್ಮ ಯೋಜನೆ ಲಾಭ ಪಡೆಯುತ್ತಿದ್ದು, ಮಾರ್ಚ್​ ತಿಂಗಳ ಹಣ ವಾರದೊಳಗೆ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. 5339 ಫಲಾನುಭವಿಗಳು ಮೃತಪಟ್ಟಿದ್ದು, ಈ ಪೈಕಿ 4917 ಜನರ ಮಾಹಿತಿಯನ್ನು ಸೇವಾ ಸಿಂಧು ಲಾಗಿನ್​ನಲ್ಲಿ ಅಪ್​ಡೆಟ್​ ಮಾಡಲಾಗಿದೆ. ಬಾಕಿ 422 ಫಲಾನುಭವಿಗಳ ಅಪ್​ಡೆಟ್​ ಮಾಡಬೇಕಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿಯಡಿ 3,75,344 ಗ್ರಾಹಕರಿದ್ದು, 513 ಕೋಟಿ ರೂ. ಸಂದಾಯವಾಗಿದೆ. ಶಕ್ತಿ ಯೋಜನೆಯಡಿ 2023ರ ಜೂ.11ರಿಂದ 2025ರ ಮೇ 8ರವರೆಗೆ ಮಹಿಳೆಯರು ಮತ್ತು ಬಾಲಕಿಯರು ಸೇರಿ 12.36 ಕೋಟಿ ಜನ ಉಚಿತ ಪ್ರಯಾಣ ಮಾಡಿದ್ದಾರೆ. ಪ್ರತಿದಿನ ಸರಾಸರಿ 1.16 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದು, ಇದುವರೆಗೆ 367.99 ಕೋಟಿ ರೂ. ಸಂದಾಯವಾಗಿದೆ. ಅನ್ನಭಾಗ್ಯದಡಿ 3.57.286 ಪಡಿತರ ಚೀಟಿಗಳಿದ್ದು, 333.28 ಕೋಟಿ ಅನುದಾನ ಮಾರ್ಚ್​ವರೆಗೆ ಸಂದಾಯವಾಗಿದೆ. ಯುವನಿಧಿಯಡಿ ಕಳೆದ ಮೇ 11ರವರೆಗೆ ಡಿಗ್ರಿ, ಡಿಪ್ಲೊಮಾ ಸೇರಿ 17,202 ಅಭ್ಯರ್ಥಿಗಳು ನೋಂದಣಿ ಮಾಡಿದ್ದು, 37 ಕೋಟಿ 81 ಲಕ್ಷ ರೂ. ಸಂದಾಯ ಮಾಡಲಾಗಿದೆ ಎಂದು ಚಿಮಕೋಡೆ ವಿವರಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶರಣಬಸಪ್ಪ ಕೋಟೆಪ್ಪಗೊಳ, ಮುಖ್ಯ ಯೋಜನಾಧಿಕಾರಿ ಕಿಶೋರ ದುಬೆ, ಆಹಾರ ಇಲಾಖೆ ಉಪನಿರ್ದೇಶಕ ಪ್ರವಿಣ ಬರಗಲ್​, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ, ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net