ಮೆರವಣಿಗೆ : ಕಾರ್ಯಕ್ರಮಕ್ಕೂ ಮುನ್ನ ನಗರದ ಕೋಟೆಯಿಂದ ಗಾಂಧಿ ವೃತ್ತ, ಬಸವ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ರಥ ಮೈದಾನದ ಸಭಾ ಭವನದವರೆಗೆ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರದ ಭವ್ಯ ಮೆರವನಿಗೆ ಜರುಗಿತು. ಮೆರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಬಿಸಿಎಂ ಅಧಿಕಾರಿ ರವೀಂದ್ರ ಮೇತ್ರೆ, ಎಇಇ ರಮೇಶ ಪಾಟೀಲ್, ಪ್ರಮುಖರಾದ ವಿಜಯಕುಮಾರಡ್ಡಿ, ಮಹಾದೇವ ರಡ್ಡಿ, ಸಂಜುರಡ್ಡಿ ಯರಬಾಗ, ನರಸಿಂಗರಡ್ಡಿ ಗದಲೆಗಾಂವ, ರಾಜರಡ್ಡಿ, ನಾಗೇಂದ್ರರಡ್ಡಿ, ಬಾಲಾಜಿರಡ್ಡಿ, ಪ್ರಕಾಶರಡ್ಡಿ, ಸುಧಾಕರರಡ್ಡಿ, ತಾತೇರಾವ ಪಾಟೀಲ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಪ್ರಮುಖರು ಭಾಗವಹಿಸಿದ್ದರು.