ಹೆತ್ತವರನ್ನು ಜೋಪಾನದಿಂದ ನೋಡಿಕೊಳ್ಳಲಿ

ದೇವದುರ್ಗದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯರು, ಮಾಜಿ ಸೈನಿಕ ಭೀಮನಗೌಡ ಮಾಲಿಪಾಟೀಲ್, ಪಂಪಣ್ಣ ಅಕ್ಕರಕಿ, ಶರಣಗೌಡ ಮಾಲಿಪಾಟೀಲ್ ಇತರರಿದ್ದರು.
ದೇವದುರ್ಗದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯರು, ಮಾಜಿ ಸೈನಿಕ ಭೀಮನಗೌಡ ಮಾಲಿಪಾಟೀಲ್, ಪಂಪಣ್ಣ ಅಕ್ಕರಕಿ, ಶರಣಗೌಡ ಮಾಲಿಪಾಟೀಲ್ ಇತರರಿದ್ದರು.
Published on
ದೇವದುರ್ಗ: ದೇವರನ್ನು ಭಕ್ತಿ ಹಾಗೂ ಆಧ್ಯಾತ್ಮದ ಮಾರ್ಗದ ಮೂಲಕ ಕಾಣಬಹುದು. ಆದರೆ, ಒಮ್ಮೆ ಕಳೆದುಕೊಂಡ ತಂದೆ- ತಾಯಿಯನ್ನು ಎಷ್ಟೇ ಪ್ರಯತ್ನಿಸಿದರೂ ಮರಳಿ ಸಿಗಲ್ಲ. ಹೀಗಾಗಿ ಹೆತ್ತವರನ್ನು ದೇವರಂತೆ ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಉಪನ್ಯಾಸಕ ರಮೇಶಬಾಬು ಯಾಳಗಿ ಹೇಳಿದರು. 
ಮಾಲಿಪಾಟೀಲ್ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳವಾರ ಉಪನ್ಯಾಸ ನೀಡಿದರು. ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ ಮಾತ್ರ ಕುಟುಂಬ ಉಳಿಯಲು ಸಾಧ್ಯ ಎಂದರು. 
ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಅವರಿಗೆ ಕಲ್ಯಾಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಜೆಡಿಎಸ್ ನಾಯಕ ಗೌರಿ ಜಿ.ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯರು, ಮಾಜಿ ಸೈನಿಕ ಭೀಮನಗೌಡ ಮಾಲಿಪಾಟೀಲ್, ಪಂಪಣ್ಣ ಅಕ್ಕರಕಿ, ಶರಣಗೌಡ ಮಾಲಿಪಾಟೀಲ್, ಉದ್ಯಮಿ ಭಾನುಪ್ರಕಾಶ್ ಖೇಣೇದ್, ವೀರಶೈವ ಮಹಾಸಭಾ ರಾಜ್ಯ ಸಮಿತಿ ಸದಸ್ಯ ವೆಂಕಟರಾಯಗೌಡ ಬೆನಕನ್, ಮೈನುದ್ದೀನ್ ಕಾಟಮಳ್ಳಿ, ಲೋಕರಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net