ನೈತಿಕ ಮೌಲ್ಯ ಅಳವಡಿಸಿಕೊಳ್ಳಲಿ

ವಿಜಯಪುರದ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿಗಳಿಗಾಗಿ ದೀಕ್ಷಾರಂಭ ಕಾರ್ಯಕ್ರಮ ನಡೆಯಿತು. ವೈ. ತಮ್ಮಣ್ಣ, ಭಕ್ತಿ ಮಹೀಂದ್ರಕರ್, ವಿ.ಎಸ್. ನಂದೀಶ ಮತ್ತಿತರರಿದ್ದಾರೆ.
ವಿಜಯಪುರದ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿಗಳಿಗಾಗಿ ದೀಕ್ಷಾರಂಭ ಕಾರ್ಯಕ್ರಮ ನಡೆಯಿತು. ವೈ. ತಮ್ಮಣ್ಣ, ಭಕ್ತಿ ಮಹೀಂದ್ರಕರ್, ವಿ.ಎಸ್. ನಂದೀಶ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ವೈ. ತಮ್ಮಣ್ಣ ಸಲಹೆ
  • ದೀಕ್ಷಾರಂಭ ಕಾರ್ಯಕ್ರಮ
ವಿಜಯಪುರ :

ಕಾಲೇಜು ಜೀವನವು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಜ್ಞಾನಾರ್ಜನೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸುವರ್ಣಾವಕಾಶವಾಗಬೇಕು ಎಂದು ಪ್ರಾಚಾರ್ಯ ವೈ. ತಮ್ಮಣ್ಣ ಹೇಳಿದರು.

ನಗರದ ಬಿಎಲ್‌ಡಿಈ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ಐಕ್ಯೂಎಸಿ ಅಡಿಯಲ್ಲಿ ಕಾಲೇಜಿನ ನೂತನ ಪದವಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಮತ್ತು ಅವರನ್ನು ಉನ್ನತ ಶಿಕ್ಷಣದ ವಾತಾವರಣಕ್ಕೆ ಪರಿಚಯಿಸಲು ಇತ್ತೀಚೆಗೆ ಹಮ್ಮಿಕೊಂಡಿದ್ದ ದೀಕ್ಷಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜಿನ ಶೈಕ್ಷಣಿಕ ಇತಿಹಾಸ, ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆಯು ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಐಕ್ಯೂಎಸಿ ಸಂಯೋಜನಾ ಧಿಕಾರಿ ಭಕ್ತಿ ಮಹೀಂದ್ರಕರ್ ಮಾತನಾಡಿ, ಕಾಲೇಜಿನ ಆರಂಭದ ಹೆಜ್ಜೆ ಗುರುತುಗಳು, ಮಹಾ ವಿದ್ಯಾಲಯದಲ್ಲಿ ಲಭ್ಯವಿರುವ ವಿವಿಧ ವೇದಿಕೆಗಳ ಬಗ್ಗೆ ಸಮಗ್ರ ಮಾಹಿತಿ ಹಾಗೂ ಕಾಲೇಜಿನ ಧ್ಯೇಯೋದ್ದೇಶಗಳನ್ನು ತಿಳಿಸಿದರು.
ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ವಿ.ಎಸ್. ನಂದೀಶ, ಕ್ರೀಡಾ ನಿರ್ದೇಶಕರಾದ ಡಾ.ಸವಿತಾ ಅಣ್ಣೆಪ್ಪನವರ್ ಮತ್ತು ಗ್ರಂಥಪಾಲಕಿ ಸವಿತಾ ಕುಲಕರ್ಣಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಬೋರಮ್ಮ ದೇಸಾಯಿ ಸ್ವಾಗತಿಸಿದರು. ಕೀರ್ತಿ ಬಡಿಗೇರ ಪ್ರಾರ್ಥಿಸಿದರು. ಆರತಿ ಬೇಲೂರು ತಂಡದವರು ಮಹಿಳಾ ಗೀತೆ ಹಾಡಿದರು. ರೇಖಾ ಗಡಗಿ ನಿರೂಪಿಸಿದರು. ಚಂದ್ರಕಲಾ ದೊಡಮನಿ ವಂದಿಸಿದರು. ದೀಪಾ ಲಗಳಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net