ದೇಶ ರಕ್ಷಣೆಗೆ ಯುವಜನತೆ ಮುಂದಾಗಲಿ / NELAMANGAL

ನೆಲಮಂಗಲದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ವಿಶೇಷ ತಹಸೀಲ್ದಾರ್​ ಸಂಧ್ಯಾ, ರಾಜಸ್ವ ನಿರೀಕ್ಷಕ ಚಂದ್ರಶೇಖರ್​, ಗ್ರಾಮ ಆಡಳಿತಾಧಿಕಾರಿ ಮಾರುತಿ, ರಘುಪತಿ, ಜೈ ಅಂಬ ಅಬಾನಿ ಕ್ಷತ್ರೀಯ ಮರಾಠ ಸಂಘದ ಕಾರ್ಯದರ್ಶಿ ಮುಕುಂದರಾವ್​ ಇದ್ದರು.
ನೆಲಮಂಗಲದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ವಿಶೇಷ ತಹಸೀಲ್ದಾರ್​ ಸಂಧ್ಯಾ, ರಾಜಸ್ವ ನಿರೀಕ್ಷಕ ಚಂದ್ರಶೇಖರ್​, ಗ್ರಾಮ ಆಡಳಿತಾಧಿಕಾರಿ ಮಾರುತಿ, ರಘುಪತಿ, ಜೈ ಅಂಬ ಅಬಾನಿ ಕ್ಷತ್ರೀಯ ಮರಾಠ ಸಂಘದ ಕಾರ್ಯದರ್ಶಿ ಮುಕುಂದರಾವ್​ ಇದ್ದರು.
Published on
ನೆಲಮಂಗಲ : ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ, ರಾಷ್ಟ್ರಪ್ರೇಮ, ಶೂರತನಕ್ಕೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಹಸೀಲ್ದಾರ್​ ಮಲ್ಲೇಶ್​ಬೀರಪ್ಪ ಪೂಜಾರ್​ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಜರ ದೇಶಾಭಿಮಾನಿ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ದೇಶ ಸದೃಢವಾಗಬೇಕಾದರೆ ಯುವಕರು ಶಿವಾಜಿ ಮಹಾರಾಜರ ಆದರ್ಶಗಳನ್ನು ಪಾಲಿಸಿ ದೇಶ ರಕ್ಷಣೆಗೆ ಮುಂದಾಗಬೇಕು ಎಂದರು.
ಜೈ ಅಂಬ ಅಬಾನಿ ಕ್ಷತ್ರೀಯ ಮರಾಠ ಸಂಘ ಅಧ್ಯಕ್ಷ ಆರ್​.ನಾರಾಯಣ್​ರಾವ್​ ಮಾತನಾಡಿ, ಶಿವಾಜಿ ಮಹಾರಾಜರು ಮರಾಠಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಹಿಂದೂ ಸಮಾಜಕ್ಕೆ ಸೇರಿದವರು. ತಾಯಿಯಿಂದ ಪ್ರೇರಣೆ ಪಡೆದ ಶಿವಾಜಿ ಮೂರು ಶತಮಾನಗಳ ಹಿಂದೆ ಸಾಮ್ರಾಜ್ಯವನ್ನು ಕಟ್ಟಿದರು. ಅವರ ನೆನಪನ್ನು ಹಸಿರಾಗಿಡಲು ಸರ್ಕಾರ ಪ್ರತಿ ವರ್ಷವೂ ಶಿವಾಜಿ ಜಯಂತಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಜೈ ಅಂಬ ಅಬಾನಿ ಕ್ಷತ್ರೀಯ ಮರಾಠ ಸಂಘದ ಉಪಾಧ್ಯಕ್ಷ ದುಗೋರ್ಜಿರಾವ್​, ಖಜಾಂಚಿ ಗಣೇಶ್​ರಾವ್​, ಸಂಘಟನಾ ಕಾರ್ಯದರ್ಶಿ ಮಂಜುನಾಥ್​, ಮಾಜಿ ಅಧ್ಯಕ್ಷ ಶಿವಾಜಿರಾವ್​, ಸದಸ್ಯ ಗೋಪಾಲ್​, ಕೇಶವಮೂರ್ತಿ, ಆಶಾಬಾಯಿ, ಗಿರಿಜಾಬಾಯಿ ಇತರರು ಇದ್ದರು.
ಪುಷ್ಪ ನಮನ : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ತಹಸೀಲ್ದಾರ್​, ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಸಮಾಜ ಮುಖಂಡರು ಪುಷ್ಪನಮನ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net