ಶಿಕ್ಷಣದೊಂದಿಗೆ ಸಂಸ್ಕಾರ ನೀಡುವ ಕೆಲಸವಾಗಲಿ

ಸೇಡಂನಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಸಂಶೋಧಕ ಮುಡಬಿ ಗುಂಡೇರಾವ ಉದ್ಘಾಟಿಸಿದರು. ಜ್ಯೋತಿ ಲಿಂಗಂಪಲ್ಲಿ, ತಾರಾಬಾಯಿ, ಸಕುಬಾಯಿ ಪವಾರ್​, ಸವಿತಾ ಕೋಡ್ಲಾ, ಲ್ಮ ಯಾದಗಿರ, ವೆಂಕಟೇಶ ಚವ್ಹಾಣ್​ ಇದ್ದರು.
ಸೇಡಂನಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಸಂಶೋಧಕ ಮುಡಬಿ ಗುಂಡೇರಾವ ಉದ್ಘಾಟಿಸಿದರು. ಜ್ಯೋತಿ ಲಿಂಗಂಪಲ್ಲಿ, ತಾರಾಬಾಯಿ, ಸಕುಬಾಯಿ ಪವಾರ್​, ಸವಿತಾ ಕೋಡ್ಲಾ, ಲ್ಮ ಯಾದಗಿರ, ವೆಂಕಟೇಶ ಚವ್ಹಾಣ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಡಬಿ ಗುಂಡೇರಾವ್​ ಅಭಿಮತ
  • ಸೇಡಂನಲ್ಲಿ ಬೀಳ್ಕೊಡುಗೆ ಸಮಾರಂಭ
ಸೇಡಂ: ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ ಎಂದು ಸಂಶೋಧಕ ಮುಡಬಿ ಗುಂಡೇರಾವ್​ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತ ಮುಖ್ಯಗುರು ತಾರಾಬಾಯಿ ಅವರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ನೀಡುವವರೇ ನಿಜವಾದ ಗುರುಗಳು. ಶಿಕ್ಷಕಿ ತಾರಾಬಾಯಿ ಅವರು ಹಾಬಾಳ (ಟಿ), ಯರಗೋಳ ಸೇರಿ ಹಲವಾರು ಗ್ರಾಮಗಳಲ್ಲಿ ಶಿಕ್ಷಕಿಯಾಗಿ ಸಲ್ಲಿಸಿದ ಸೇವೆ ಶ್ಲಾನೀಯ ಎಂದರು.
ಕವಿಯತ್ರಿ ಜ್ಯೋತಿ ಲಿಂಗಂಪಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಶಿಕ್ಷಕಿ ತಾರಾಬಾಯಿ ಅವರು ಪ್ರಶಸ್ತಿ ಹಿಂದೆ ಹೋದವರಲ್ಲ, ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿಭಾಯಿಸಿ ಇಲಾಖೆ ಮತ್ತು ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಸವಿತಾ ಕೋಡ್ಲಾ ಮಾತನಾಡಿದರು. ಸಕ್ಕುಬಾಯಿ ಪವಾರ್​, ಸವಿತಾ ಕೋಡ್ಲಾ, ಲ್ಮ ಯಾದಗಿರ, ವೆಂಕಟೇಶ ಚವ್ಹಾಣ್​ ಇತರರಿದ್ದರು. ಜ್ಯೋತಿ ಲಿಂಗಂಪಲ್ಲಿ ಸಂಗೀತ ಗಾಯನ ನಡೆಸಿಕೊಟ್ಟರು. ವೆಂಕಟೇಶ ಸ್ವಾಗತಿಸಿದರು. ಶಿವಕುಮಾರ ಜುಲ್ಪಿ ನಿರೂಪಣೆ ಮಾಡಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net