ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಲಿ

 Let the school parliament foster leadership among students.
Let the school parliament foster leadership among students.
Published on
ಕುದೂರು:ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಚುನಾವಣೆಯು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಮಾದರಿಯಲ್ಲಿ ನಡೆಯಿತು.
ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ, ಚುನಾವಣಾ ಪ್ರಚಾರ, ಮತದಾರರ ಪಟ್ಟಿ, ಮತಪತ್ರ ವಿತರಣೆ, ಬೆರಳಿಗೆ ಶಾಯಿ, ಗುಪ್ತ ಮತದಾನ, ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಸೇರಿ ಸಂಪೂರ್ಣ ಚುನಾವಣಾ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಸಲಾಯಿತು.
14 ರಿಂದ 16 ವರ್ಷದ 70 ವಿದ್ಯಾರ್ಥಿಗಳು ಒಂದು ಮತಗಟ್ಟೆಗಳಲ್ಲಿ ಮತದಾನ ಹಕ್ಕು ಚಲಾಯಿಸಿ 16 ಸ್ಥಾನಗಳಿಗೆ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಮೋನಿಷಾ ಶಾಲಾ ರಾಷ್ಟ್ರಪತಿ ಶಾಲಾ ಸಂಸತ್ತಿನ ಪ್ರಧಾನಮಂತ್ರಿ ಸಾಹಿಲ್ ಪಾಷಾ ಆಯ್ಕೆಯಾದರು.
ಸಚಿವ ಸಂಪುಟದ ಸದಸ್ಯರಾಗಿ ಬಿ.ಬಿ ಹಾಜಿರಾ,ತನುಶ್ರೀ, ಶೇಖರ್, ಹನುಮಂತರಾಜು, ಪಲ್ಲವಿ, ಧನುಶ್ರೀ ಲಕ್ಷ್ಮೀದೇವಿ, ವಿಷ್ಣು ಆಯ್ಕೆಯಾದರು. 8 ಹಾಗೂ 9 ನೇ ತರಗತಿಗಳಿಂದ ತಲಾ 5 ವಿದ್ಯಾರ್ಥಿ ಹಾಗೂ 10 ನೇ ತರಗತಿಯ 6 ವಿದ್ಯಾರ್ಥಿ ಶಾಲಾ ಸಂಸತ್ ಸದಸ್ಯರಾಗಿ ಆಯ್ಕೆಯಾದರು.
ಶಾಲಾ ರಾಷ್ಟ್ರಪತಿ ಮೋನಿಷಾ ಮಾತನಾಡಿ, ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಜವಾಬ್ದಾರಿ, ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಮತದಾನದ ಮಹತ್ವ ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net