ಹಳೇ ಮೀಸಲಾತಿ ಪದ್ಧತಿ ಜಾರಿಯಾಗಲಿ reservation

ಹಳೇ ಮೀಸಲಾತಿ ಪದ್ಧತಿ ಜಾರಿಯಾಗಲಿ reservation
ಹಳೇ ಮೀಸಲಾತಿ ಪದ್ಧತಿ ಜಾರಿಯಾಗಲಿ reservation
Published on
ಬಂಗಾರಪೇಟೆ: ನಿವೃತ ನ್ಯಾಯಮೂರ್ತಿ ನಾಗಮೋಹನ್​ ದಾಸ್​ ಅವರ ವರದಿಯು ಪರಿಶಿಷ್ಟ ಜಾತಿಯ ಒಂದು ವರ್ಗದ ರಾಜಕೀಯ ತುಷ್ಟಿಕರಣಕ್ಕೆ ಸೀಮಿತವಾಗಿದ್ದು, ಇತರ ಉಪಜಾತಿಗಳಿಗೆ ಯಾವುದೇ ಸೌಲಭ್ಯ ಸಿಗದ ಕಾರಣ ಈ ಕೂಡಲೇ ಸರ್ಕಾರ ನಾಗಮೋಹನ್​ ದಾಸ್​ ಅವರ ವರದಿ ರದ್ದುಗೊಳಿಸಿ ಹಳೇ ಮೀಸಲಾತಿ ಪದ್ಧತಿ ಜಾರಿಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಕಲಾವಿದ ಯಲ್ಲಪ್ಪ ಒತ್ತಾಯಿಸಿದರು.reservation
ಪಟ್ಟಣದ ದಲಿತ ಸಂಘರ್ಷ ಸಮಿತಿ ಕರ್ನಾಟಕ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಗಮೋಹನ್​ ದಾಸ್​ ಅವರ ವರದಿ ಅವೈಜ್ಞಾನಿಕ. ಪಕ್ಷಪಾತದಿಂದ ಕೂಡಿದ್ದು, ಕರ್ನಾಟಕ ಅನುಸೂಚಿತ ಜಾತಿಗಳ ಮಸೂದೆ 2015ರ ಸುತ್ತೋಲೆ ರದ್ದುಗೊಳಿಸಬೇಕು. ಹೆಚ್ಚು ಹುದ್ದೆ ಇದ್ದಾಗ ಮಾತ್ರ ಒಳಮಿಸಲಾತಿಯ ರೋಸ್ಟರ್​ ನಿಯಮ ಅನ್ವಯವಾಗಬೇಕು. ಒಂದು ವೇಳೆ ಹುದ್ದೆಗಳ ಸಂಖ್ಯೆ ಕಡಿಮೆ ಇದ್ದಾಗ ಎ.ಬಿ.ಸಿ ವರ್ಗಗಳ ಆಧಾರದ ಮೇಲೆ ನೇಮಕಾತಿ ಮಾಡದೆ ಪ.ಜಾತಿ ಸಾಮಾನ್ಯ ಎಂಬ ನಿಯಮದಡಿ ಎಲ್ಲ ಉಪಜಾತಿಗಳ ಅಭ್ಯರ್ಥಿಗಳು ಸ್ಪರ್ಧೆ ಮಾಡುವಂತಾಗಬೇಕು. ಯಾವ ವರ್ಗದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೋ ಅವರನ್ನು ನೇಮಕಾತಿ ಮಾಡಬೇಕು ಎಂದರು.
ಜಾಗೃತಿ ಸಮಿತಿ ಸದಸ್ಯ ವೆಂಕಟೇಶ್​, ರಾಮಲಿಂಗಾಪುರ ವೇಣು, ಯಾರನಾಗನಹಳ್ಳಿ ರವಿಚಂದ್ರನ್​, ಚಿಕ್ಕಬಲಗಮಾದಿ ಚಂದ್ರಪ್ಪ, ಹಿರೇಕರಪ್ಪನಹಳ್ಳಿ ಮುನಿರಾಜು, ದೇಶಹಳ್ಳಿ ಲಕ್ಷ$್ಮಮ್ಮ, ಸಕ್ಕನಹಳ್ಳಿ ವೆಂಕಟೇಶ್​, ಗಂಗಮ್ಮನಪಾಳ್ಯ ಮದನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net