4 ಅರ್ಜಿ ಸ್ಥಳದಲ್ಲೇ ವಿಲೇವಾರಿ: ಸಾರ್ವಜನಿಕರಿಂದ ಒಟ್ಟು 62 ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಪೈಕಿ ಕಂದಾಯ ಇಲಾಖೆಗೆ ಸಂಬಂಧಿಸಿದ 46, ಸೆಸ್ಕ್ 4, ಅರಣ್ಯ ಮತ್ತು ಆಹಾರ ಇಲಾಖೆಯ ತಲಾ 3, ಗ್ರಾಮೀಣಾಭಿವೃದ್ಧಿ 2, ಸರ್ವೇ 2, ಸಮಾಜ ಕಲ್ಯಾಣ ಇಲಾಖೆ 1, ಗ್ರಾಮೀಣ ಕುಡಿಯುವ ನೀರು ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬಂದಿದ್ದವು. ಆಹಾರ ಇಲಾಖೆಗೆ ಸಂಬಂಧಿಸಿದ 4 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. ಉಳಿದ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.