ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಅಧ್ಯಕ್ಷ ಆದೇಶ ಲಿಂಗರಾಜು ಮಾತನಾಡಿ, ಹೊಯ್ಸಳ ಶಾಲೆಯವರು ಭಸ್ಮೀಕರಣ ಹೊಂಡದ 20 ಗುಂಟೆ ಹಾಗೂ ಪುರಸಭೆ ಖಾತೆಯ ಆಸ್ತಿ ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕೆಂದು ಮನವಿ ಮಾಡಿದ್ದೆವು. ಆದರೆ ಪುರಸಭೆ ಅಧಿಕಾರಿಗಳು, ಶಾಸಕರು, ತಹಶೀಲ್ದಾರ್ ಜು.2 ರಂದು ನಮಕಾವಸ್ಥೆಗೆ ಸರ್ವೇ ಮಾಡಿ ಜನರ ಕಣ್ಣೊರೆಸುವ ಕೆಲಸ ಮಾಡಿದ್ದು ಬಿಟ್ಟರೆ, ಈವರೆಗೂ ಜಾಗ ತೆರವು ಗೊಳಿಸಿಲ್ಲ ಈ ವಿಷಯದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅನುಮಾನವಿದೆ. ಜಾಗವನ್ನು ಅಧಿಕಾರಿಗಳು ವಶಕ್ಕೆ ಪಡೆಯದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರವಾದ ಹೋರಟಕ್ಕೆ ಮುಂದಾಗಲಿದ್ದೇವೆ ಎಂದರು.