ಸರ್ಕಾರ ಸಾಮಾಜಿಕ ನ್ಯಾಯದ ಬದ್ಧತೆ ಪ್ರದರ್ಶಿಸಲಿ

ಬೆಳಗಾವಿಯ ಸುದ್ದಿಗೊಷ್ಠಿಯಲ್ಲಿ ವಿ.ಎಸ್.ಉಗ್ರಪ್ಪ ಮಾತನಾಡಿದರು. ಶಿವಾನಂದ ಸ್ವಾಮೀಜಿ, ವೆಂಕಟೇಶ ನಾಯಿಕ, ಮಹೇಶ ಶಿಗೆಹಳ್ಳಿ, ಸುರೇಶ ಗವನ್ನವರ, ಯಲ್ಲಪ್ಪ ಕೋಳೆಕರ ಇತರರಿದ್ದರು.
ಬೆಳಗಾವಿಯ ಸುದ್ದಿಗೊಷ್ಠಿಯಲ್ಲಿ ವಿ.ಎಸ್.ಉಗ್ರಪ್ಪ ಮಾತನಾಡಿದರು. ಶಿವಾನಂದ ಸ್ವಾಮೀಜಿ, ವೆಂಕಟೇಶ ನಾಯಿಕ, ಮಹೇಶ ಶಿಗೆಹಳ್ಳಿ, ಸುರೇಶ ಗವನ್ನವರ, ಯಲ್ಲಪ್ಪ ಕೋಳೆಕರ ಇತರರಿದ್ದರು.
Published on
ಬೆಳಗಾವಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ.56ರಷ್ಟು ಹೆಚ್ಚಿಸಿರುವುದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು. ಈ ಮೂಲಕ ಸಾಮಾಜಿಕ ನ್ಯಾಯದ ಬದ್ಧತೆ ಪ್ರದರ್ಶಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದ್ಧತೆ ಪ್ರದರ್ಶಿಸಬೇಕಿದೆ. ರಾಜ್ಯ ಬಿಜೆಪಿ ಸರ್ಕಾರವೇ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೆ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡದ ಶೇ.4ರಿಂದ 7ಕ್ಕೆ ಹಾಗೂ ಹಿಂದುಳಿದ ವರ್ಗದ ಮೀಸಲಾತಿ ಪ್ರಮಾಣವನ್ನು ಶೇ.32ಕ್ಕೆ ಹೆಚ್ಚಿಸಿದೆ. ಆದರೆ, ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೀಸಲಾತಿ ಬಗ್ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶಾಸಕ, ಸಂಸದರು ಧ್ವನಿ ಎತ್ತದೆ ಇರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದಿಂದ ಆಯ್ಕೆಯಾದ ಎರಡು ಪಕ್ಷದ ಸಂಸದರು ಸಂಸತ್ತಿನಲ್ಲಿ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಒತ್ತಡ ಹಾಕಬೇಕು. ಮೇ ಅಂತ್ಯದೊಳಗೆ ಮೀಸಲಾತಿ ಸಂವಿಧಾನ 9ನೇ ಪರಿಚ್ಛೇದಕ್ಕೆ ಸೇರಿಸಬೇಕು. ಇಲ್ಲವಾದರೆ, ಹೋರಾಟ ಅನಿವಾರ್ಯ ಎಂದರು. ಮಹಿಳಾ ಮೀಸಲಾತಿ ಕುರಿತು ಕೇಂದ್ರ ಸರ್ಕಾರ ಬದ್ಧತೆ ತೋರುತ್ತಿಲ್ಲ. 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ವಿಂಗಡನೆ ಮಾಡುವುದು ಸರಿಯಲ್ಲ. ಇದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದರು.
ಎಸ್ಟಿಗೆ ಸೇರಿಸಲು ವಿರೋಧವಿಲ್ಲ!: ಕುರುಬ ಸಮುದಾಯ ಸೇರಿ ಯಾವುದೇ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಮ್ಮ ವಿರೋಧವಿಲ್ಲ. ಆದರೆ, ಅರ್ಹರನ್ನು ಸೇರಿಸಬೇಕು. ಮೊದಲು ಕುಲಶಾಸೀಯ ಅಧ್ಯಯನ ಮಾಡಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಬಾರದು. ಭೋವಿಗಳು ಪರಿಶಿಷ್ಟ ಜಾತಿಗೆ ಸೇರಿದವರು, ಅವರಿಗೆ ಎಸ್ಸಿ ಪ್ರಮಾಣಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಶಿವಾನಂದ ಸ್ವಾಮೀಜಿ, ವೆಂಕಟೇಶ ನಾಯಿಕ, ಮಹೇಶ ಶಿಗೆಹಳ್ಳಿ, ಸುರೇಶ ಗವನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net