ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲಿ mainstream of society
ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲಿ mainstream of society
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಚಿಕ್ಕಅಂಕಂಡಾಹಳ್ಳಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಎಚ್.ಎಂ ರವಿ ಹೇಳಿಕೆ
ಬಂಗಾರಪೇಟೆ: ಅಂಗವಿಕಲರು ತಮ್ಮ ನ್ಯೂನತೆಗಳನ್ನು ಮರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಾಗೂ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂದು ಚಿಕ್ಕಅಂಕಂಡಾಹಳ್ಳಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಎಚ್.ಎಂ ರವಿ ತಿಳಿಸಿದರು. mainstream of society
ತಾಲೂಕಿನ ಚಿಕ್ಕ ಅಂಕಂಡಾಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ಹಾಗೂ ಇತರ ಪರಿಕರಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರಿ ಸಾಧನೆಗೆ ಅಂಗವೈಪಲ್ಯ ಅಡ್ಡಿಯಾಗಬಾರದು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಅವರ ಕಾರ್ಯವೈಖರಿ ಉತ್ತಮವಾಗಿದ್ದು, 15ನೇ ಹಣಕಾಸು ಯೋಜನೆಯ ಶೇ.5ರ ಅನುದಾನದಲ್ಲಿ ಅಂಗವಿಕಲರಿಗೆ ಸೈಕಲ್ ಹಾಗೂ ಇತರ ಪರಿಕರಗಳನ್ನು ನೀಡಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಿ ಸರ್ವೇ ಸದಸ್ಯರ ಸಹಕಾರದೊಂದಿಗೆ ಅನುಮೋದನೆ ಪಡೆಯಲಾಯಿತ್ತು ಎಂದರು.
ಗ್ರಾಪಂ ಅಧ್ಯಕ್ಷ ಗಿರಿಜಮ್ಮ ಶ್ರೀನಿವಾಸ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಗುತ್ತಿಗೆದಾರರು ಸಾಲ ಮಾಡಿ ಬಡ್ಡಿಗೆ ಹಣ ತಂದು ಸರ್ಕಾರದ ನಿಯಮದಂತೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ, ಆದರೆ ಇದುವರೆಗೂ 15ನೇ ಹಣಕಾಸು, ಸಪ್ಲೇ ಬಿಲ್ ಒಳಗೊಂಡಂತೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಆದರಿಂದ ಸರ್ಕಾರ ಎಚ್ಚೆತ್ತುಕೊಂಡು ಬಾಕಿಯಿರುವ ಅನುದಾನದ ಬಿಲ್ಗಳನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.