ನಮ್ಮಿಂದ ಇಲಾಖೆ ಗೌರವ ಕುಂದದಿರಲಿ

ಗುರುಮಠಕಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಬಳಗ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಯೋನಿವೃತ್ತ ಹಿರಿಯ ಡಯಟ್ ಉಪನ್ಯಾಸಕ ಜಿ.ಚಂದ್ರಕಾAತರೆಡ್ಡಿ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ತಾಪಂ ಇಒ ಬಸವರಾಜ ಶರಭೈ, ನಿವೃತ್ತ ಬಿಇಒ ಸತ್ಯಕುಮಾರ ಬಾಗೋಡಿ ಇತರರಿದ್ದರು.
ಗುರುಮಠಕಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಬಳಗ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಯೋನಿವೃತ್ತ ಹಿರಿಯ ಡಯಟ್ ಉಪನ್ಯಾಸಕ ಜಿ.ಚಂದ್ರಕಾAತರೆಡ್ಡಿ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ತಾಪಂ ಇಒ ಬಸವರಾಜ ಶರಭೈ, ನಿವೃತ್ತ ಬಿಇಒ ಸತ್ಯಕುಮಾರ ಬಾಗೋಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಡಯಟ್ ಉಪನ್ಯಾಸಕ ಚಂದ್ರಕಾAತರೆಡ್ಡಿ ಸಲಹೆ
  • ಶಿಕ್ಷಕರ ಬಳಗದಿಂದ ಸನ್ಮಾನ
ಗುರುಮಠಕಲ್:

ಎಲ್ಲ ಕ್ಷೇತ್ರಗಳು ತಾಂತ್ರಿಕವಾಗಿ ಅತ್ಯಂತ ವೇಗದಲ್ಲಿ ಬದಲಾವಣೆ ಮತ್ತು ಉನ್ನತಿಯತ್ತ ನುಗ್ಗುತ್ತಿವೆ. ಸಮಾಜ ನಿರ್ಮಾಣದ ಬಹುಮೂಲ್ಯ ಅಂಶದ ಉತ್ಪಾದಕತೆ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ನಿವೃತ್ತ ಹಿರಿಯ ಡಯಟ್ ಉಪನ್ಯಾಸಕ ಜಿ. ಚಂದ್ರಕಾAತರೆಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಬಳಗ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳನ್ನು ನೀವು ಸಮಾಜದ ಪ್ರತಿಷ್ಠಿತರನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಹೊಂದಿದ್ದೀರಿ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ. ನಮ್ಮ ವ್ಯಕ್ತಿತ್ವವೇ ನಮ್ಮ ಗುರುತಾಗಬೇಕು ಎಂದು ಸಲಹೆ ನೀಡಿದರು.
ಶಹಾಪುರ ತಾಪಂ ಇಒ ಬಸವರಾಜ ಶರಭೈ ಮಾತನಾಡಿ, ಕೋವಿಡ್ ಅವಽ ಶಿಕ್ಷಣ ಸೇರಿ ಎಸ್ಸೆಸ್ಸೆಲ್ಸಿ -Àಲಿತಾಂಶ ಹೆಚ್ಚಳ ಕಾರ್ಯದಲ್ಲಿ ಚಂದ್ರಕಾAತರೆಡ್ಡಿ ಮಾರ್ಗದರ್ಶನ ಸೂರ್ತಿ ನೀಡಿತ್ತು. ಅವರು ನಮ್ಮ ತಾಲೂಕಿನವರೇ ಆಗಿದ್ದರಿಂದ ನಿವೃತ್ತರಾದರೂ ಬೇಕಾದಾಗ ಮಾರ್ಗದರ್ಶನ ಪಡೆಯುವ ಅವಕಾಶ ಸಿಗಲಿದೆ ಎಂದರು.
ನಿವೃತ್ತ ಬಿಇಒ ಸತ್ಯಕುಮಾರ ಬಾಗೋಡಿ, ಶಿವರಾಜ ಸಾಕಾ, ಭೀಮಪ್ಪ ಮಾತನಾಡಿ, ಚಂದ್ರಕಾAತರೆಡ್ಡಿ ಕಾರ್ಯವೈಖರಿಯನ್ನು ಕೊಂಡಾಡಿದರು.
ಖಾಸಾ ಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿಕ್ಷಣ ಸಂಯೋಜಕ ರವೀಂದ್ರ ಚವ್ಹಾಣ್, ಸಿಆರ್‌ಪಿ ಬಾಲಪ್ಪ ಸಿರಿಗೆಂ, ಲಕ್ಷಿ÷್ಮÃಕಾಂತರೆಡ್ಡಿ, ನಾಗಿರೆಡ್ಡಿ, ಹಣಮಂತ ಹಂದ್ರಿಕಿ, ಮಾಣಿಕ್ಯಪ್ಪ, ನಾರಾಯಣರೆಡ್ಡಿ, ಮಹಿಪಾಲರೆಡ್ಡಿ, ಅನಿಲಕುಮಾರ, ಮಾಣಿಕರೆಡ್ಡಿ, ಅರವಿಂದ ಪಸಾರ, ಶಂಭುರೆಡ್ಡಿ ಹಂದ್ರಿಕಿ, ಕಿಷ್ಟಪ್ಪ, ಎಸ್.ಎಂ. ಭೂತಾಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net