ಬಿಜೆಪಿ ಹಗರಣದ ದಾಖಲೆ ಬಿಡುಗಡೆ ಮಾಡಲಿ- ಸಚಿವ ಸತೀಶ ಜಾರಕಿಹೊಳಿ

ಸಚಿವ ಸತೀಶ ಜಾರಕಿಹೊಳಿ
ಸಚಿವ ಸತೀಶ ಜಾರಕಿಹೊಳಿ
Published on
ಬೆಳಗಾವಿ: ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿರುವ ಬಿಜೆಪಿ ನಾಯಕರು ಈವರೆಗೂ ದಾಖಲೆ ಬಿಡುಗಡೆ ಮಾಡದೆ ಜನರ ದಾರಿ ತಪ್ಪಿಸುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾಖಲೆ ಬಿಡುಗಡೆ ಮಾಡಿದ ನಂತರವಷ್ಟೇ ಅದರಲ್ಲಿರುವ ಅಂಶಗಳನ್ನು ಪರಿಶೀಲಿಸಲು ಸಾಧ್ಯ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಿಚಾರಣೆ ನಡೆದಿದೆ. ಗೃಹ ಸಚಿವ ಪ್ರಿಯಾಂಕಾ ಖರ್ಗೆ ಕೆಪಿಎಸ್‌ಸಿಗೆ ಸಂಬಂಧಪಟ್ಟವರಲ್ಲ. ದಾಖಲೆಗಳು ಹೊರಬಂದ ಬಳಿಕ ಈ ಬಗ್ಗೆ ಪರಿಶೀಲನೆ ನಡೆಸೋಣ ಎಂದರು.
ಮಗಳ ನೇಮಕಾತಿ ವಿವಾದ ಹಾಗೂ ಅಕ್ರಮಗಳ ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿ ಅಧ್ಯಕರಾಗಿದ್ದ ಶಿವಶಂಕರಪ್ಪ ಸಾಹುಕಾರ ಹಗರಣದ ಜವಾಬ್ದಾರಿಯನ್ನೂ ಹೊರಬೇಕು. ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಪದಾಧಿಕಾರಿಯನ್ನು ಬಂಧಿಸಲಾಗಿದ್ದು, ಅವರು ಕೂಡ ಉತ್ತರ ನೀಡಬೇಕು.
ಬಿಜೆಪಿ ಪಾದಯಾತ್ರೆ ನಡೆಸಲು ಸ್ವತಂತ್ರವಾಗಿದೆ. ಬರೀ ಬಳ್ಳಾರಿ ಮಾತ್ರವಲ್ಲ, ಇಡೀ ರಾಜ್ಯವನ್ನು ಸುತ್ತಿ ಪಾದಯಾತ್ರೆ ನಡೆಸಬಹುದು. ಅದನ್ನು ನಾವು ಪ್ರಶ್ನಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ವಿಚಾರ ಜನರ ಮುಂದಿಡಲು ವಿವಿಧ ರೀತಿಯ ಹೋರಾಟ ನಡೆಸುವುದು ಸಹಜ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net