ಫಲಾನುಭವಿಗಳಿಗೆ ಸೌಲಭ್ಯ ತಲುಪಲಿ

Let the benefits reach the beneficiaries.
Let the benefits reach the beneficiaries.
Published on
ತಿಪಟೂರು: ಪ್ರತಿಯೊಂದು ಇಲಾಖೆಗಳೂ ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಾಗ ಮಾತ್ರ ಸರ್ಕಾರದ ಯೋಜನೆಗಳು ರೈತರನ್ನು ತಲುಪಲು ಸಾಧ್ಯ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ತಾಲೂಕು ತೋಟಗಾರಿಕೆ ಇಲಾಖೆ ಆಂದೋಲನದ ರೀತಿ ತಾಲೂಕಿನಾದ್ಯಂತ ತೆಂಗಿನಲ್ಲಿ ಉಲ್ಪಣಿಸಿರುವ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಂಗಳವಾರ ಹೊನ್ನವಳ್ಳಿಯಲ್ಲಿ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಕೃಷಿ ೇತ್ರದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಸನ್ನಿವೇಶದ ಬಗ್ಗೆ ಪ್ರಸ್ತಾಪಿಸಿ, ಪ್ರತಿಯೊಂದು ಇಲಾಖೆಗಳು ಗ್ರಾಮ ಮಟ್ಟದಲ್ಲಿ ಈ ತರಹದ ಕಾರ್ಯಕ್ರಮ ಹಮ್ಮಿಕೊಂಡು ಮಾಹಿತಿ ನೀಡಿದ್ದೇ ಆದಲ್ಲಿ ಪ್ರತಿಯೊಬ್ಬ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪಲು ಸಾಧ್ಯ ಎಂದರು.
ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅರ್ಥಿಕವಾಗಿ ಸದೃಢರಾಗಬೇಕಿದೆ. ಅದೇ ರೀತಿ ರೈತರು ಸ್ವಾವಲಂಬಿಗಳಾದರೆ ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯ. ತೆಂಗು ಬೆಳೆಯನ್ನು ಕಾಡುತ್ತಿರುವ ಕೀಟ ಮತ್ತು ರೋಗಬಾಧೆ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ವಹಿಸಿರುವ ಕ್ರಮ ಪ್ರಶಂಸನೀಯ. ಹೊನ್ನವಳ್ಳಿ ಹೋಬಳಿ ನೀರಾವರಿ ಯೋಜನೆಗಳ ಬಗ್ಗೆ ಮತ್ತು ತೆಂಗು ಬೆಳೆಗಾರರ ಹಿತ ಕಾಯಲು ತೆಂಗು ತಂತ್ರಜ್ಞಾನ ಪಾರ್ಕ್​ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್​.ಆರ್​.ಚಂದ್ರಶೇಖರ್​ ತೆಂಗಿನಲ್ಲಿ ನೀರು, ಮಣ್ಣಿನ ಆರೋಗ್ಯ ನಿರ್ವಹಣೆ, ಉತ್ತಮ ಬೇಸಾಯ ತಾಂತ್ರಿಕತೆ ಹಾಗೂ ಕೀಟ ಮತ್ತು ರೋಗ ನಿರ್ವಹಣೆ ಕುರಿತ ತಾಂತ್ರಿಕ ಮಾಹಿತಿ ನೀಡಿದರು. ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ಎಚ್​.ಎಸ್​.ಮಂಜು. ಅಧಿಕಾರಿಗಳಾದ ಎಸ್​.ಅಜಿತ್​ಕುಮಾರ್​, ಎಂ.ಕರಣ್​, ಮಲ್ಲಿಕಾರ್ಜುನಹೆಬ್ಬಾಳ. ಶಮಂತ ಟಿ.ಆರ್​.ಅಶ್ವಿನಿ ಬಡ್ನಿ, ಪಿಡಿಒ ಶಿವನಂಜೇಗೌಡ, ಕಾರ್ಯದರ್ಶಿ ಜಗದೀಶ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net