ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲಿ

ಕಮರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ. ಜವರೇಶ್ ಬಹುಮಾನಗಳನ್ನು ವಿತರಿಸಿದರು.
ಕಮರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ. ಜವರೇಶ್ ಬಹುಮಾನಗಳನ್ನು ವಿತರಿಸಿದರು.
Published on
ಯಳಂದೂರು: ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಇಲ್ಲಿನ ನೈಜ ಸಮಸ್ಯೆಗಳ ದರ್ಶನವಾಗುತ್ತದೆ. ಇದಕ್ಕೆ ಪರಿಹಾರವನ್ನು ಕೊಂಡುಕೊಳ್ಳುವ ಹಲವು ಆಲೋಚನೆಗಳು ಮೂಡುತ್ತವೆ. ಇದು ದೇಶದ ಪ್ರಗತಿಗೆ ಪೂರಕವಾದ ಅಂಶಗಳನ್ನು ಸೃಜಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕಮರವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ. ಜವರೇಶ್ ಕರೆ ನೀಡಿದರು.
ಮಂಗಳವಾರ ಕಮರವಾಡಿ ಗ್ರಾಮದಲ್ಲಿ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಇಂದಿಗೂ ನಮ್ಮ ದೇಶದ ಗ್ರಾಮೀಣ ಭಾಗದಲ್ಲಿ ಮೂಲ ಸಮಸ್ಯೆಗಳು ಇವೆ. ಸರ್ಕಾರ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಗ್ರಾಮವನ್ನು ಇಲ್ಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೇವಲ ಸರ್ಕಾರದ ಜವಾಬ್ದಾರಿ ಎಂಬ ಅರಿವಿನಲ್ಲೇ ಅನೇಕರು ಇದ್ದಾರೆ. ಆದರೆ ನಾವು ನಮ್ಮ ವೈಯುಕ್ತಿಕ ಸ್ವಚ್ಛತೆಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ನಮ್ಮ ಬೀದಿ, ಗ್ರಾಮಕ್ಕೂ ನೀಡಬೇಕು, ಸೂಕ್ತ ಕಸವಿಲೇವಾರಿ, ಕಸ ವಿಂಗಡಣೆ, ನೀರಿನ ಸದ್ಬಳಕೆ, ಪರಿಸರ ಕಾಳಜಿ, ಗಿಡ ನೆಟ್ಟು ಪೋಷಿಸುವುದು, ಇದರ ಅನುಕೂಲಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರು.
ಇದೆ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿದರು. ಚಾಮುಲ್ ನಿರ್ದೇಶಕ ಕಮರವಾಡಿರೇವಣ್ಣ, ವ್ಯವಸ್ಥಾಪಕ ರಾಜ್‌ಕುಮಾರ್ ಕಾಲೇಜಿನ ಪ್ರಾಂಶುಪಾಲ ಥಿಯೋಡರ್ ಲೂಥರ್, ಶಿಬಿರಾಧಿಕಾರಿ ಡಾ.ಕೆ.ಜೆ. ಶಿವಕುಮಾರ್, ಎನ್.ವಿ. ಸಿಂಧು, ಗ್ರಾಪಂ ಕಾರ್ಯದರ್ಶಿ ಲಲಿತಾ, ಶಿಕ್ಷಕರಾದ ಶಂಕರಾನಂದ, ಮಧುರಾ, ದೊರೆಸ್ವಾಮಿ, ಗ್ರಾಮದ ಮುಖಂಡರಾದ ಕೆ. ಬಸವರಾಜು, ಪಿ. ಕುಮಾರ, ಶಿವಸ್ವಾಮಿ, ಗಿರೀಶ್, ಮಹದೇವ, ಪ್ರಭು, ಸರ್ವಮಂಗಳಾ, ಮಹೇಶ್ವರಿ, ನಂದಿನಿ, ಕೆ.ಪಿ. ಮಹದೇವಸ್ವಾಮಿ, ನಂಜುಂಡಪ್ಪ, ಎನ್. ನಾಗರಾಜು, ಆನಂದ, ಕೆಂಪೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net