ತಾಲೂಕಿನ ಸಾಲುಗೊಪ್ಪಲು ಹಾಗೂ ಹೊಸಕಪ್ಪಲು ಗ್ರಾಮದಲ್ಲಿ ಶನಿವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಆರ್ಥಿಕ ಸಬಲೀಕರಣಕ್ಕೆ ಸಹಕಾರವಾಗಲಿದೆ. ಹೈನುಗಾರಿಕೆ ಗ್ರಾಮೀಣ ರೈತ ಕುಟುಂಬಗಳ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದನ್ನು ಕೇವಲ ಉಪಕಸುಬಾಗಿ ಪರಿಗಣಿಸದೆ ವೈಜ್ಞಾನಿಕವಾಗಿ ಕೈಗೊಂಡರೆ ಉತ್ತಮ ಆದಾಯದ ಮೂಲವಾಗಲಿದೆ. ಗುಣಮಟ್ಟದ ಹಸು, ಎಮ್ಮೆಗಳನ್ನು ಆಯ್ಕೆ ಮಾಡುವುದು, ಸಮತೋಲಿತ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಕೊಟ್ಟಿಗೆ ವ್ಯವಸ್ಥೆ ಮಾಡುವುದು ಅಗತ್ಯ ಎಂದರು.