ಗುಳೇದಗುಡ್ಡ ಪಟ್ಟಣದ ಗುರುಸಿದ್ಧೇಶ್ವರ ಬಿಎಡ್ ಕಾಲೇಜಿನಲ್ಲಿ ಧಾರವಾಡದ ಸಾರಥಿ ಫೌಂಡೇಷನ್ ವತಿಯಿಂದ ಕರಿಯಪ್ಪ ಮಾದರ ಹಾಗೂ ಅವರ ತಾಯಿ ದ್ಯಾಮವ್ವ ಅವರನ್ನು ಸನ್ಮಾನಿಸಲಾಯಿತು. ಫೌಂಡೇಷನ್ ಅಧ್ಯಕ್ಷ ಪಂಪಾಪತಿ ಹೆಗಡಿ, ಗುರುಸಿದ್ಧೇಶ್ವರ ಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಸಾಹಿತಿ ಡಾ. ವಿ.ಎ. ಬೆನಕನಾಳ, ಪ್ರಾಚಾರ್ಯ ನೀಲಪ್ಪ ಗಾಣಿಗೇರ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಂಪಾಪತಿ ಹೆಗಡಿ ಅಭಿಮತ
ಸಾರಥಿ ಫೌಂಡೇಷನ್ ವತಿಯಿಂದ ಕರಿಯಪ್ಪಗೆ ಸನ್ಮಾನ
ಗುಳೇದಗುಡ್ಡ: ಐಐಟಿ ಪ್ರವೇಶ ಪರೀಕ್ಷೆ ದೇಶದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದ್ದು, ನಿರಂತರ ಪರಿಶ್ರಮ, ಶಿಸ್ತು ಮತ್ತು ಗುರಿಯತ್ತ ಏಕಾಗ್ರತೆಯಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಾರಥಿ ಫೌಂಡೇಷನ್ ಅಧ್ಯಕ್ಷ ಪಂಪಾಪತಿ ಹೆಗಡಿ ಹೇಳಿದರು.
ಪಟ್ಟಣದ ಗುರುಸಿದ್ಧೇಶ್ವರ ಬಿಎಡ್ ಕಾಲೇಜಿನಲ್ಲಿ ಸಮೀಪದ ಹಾನಾಪೂರ ಎಸ್‌ಪಿ ಗ್ರಾಮದ ವಿದ್ಯಾರ್ಥಿ ಕರಿಯಪ್ಪ ಮಾದರ ಅವರು ಐಐಟಿ ಮದ್ರಾಸ್‌ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಧಾರವಾಡದ ಸಾರಥಿ ಫೌಂಡೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾರಥಿ ಫೌಂಡೇಷನ್ ಉಚಿತವಾಗಿ ನೀಟ್, ಸಿಇಟಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಿದ್ದು, ಅದರ ಸಲವಾಗಿ ಕರಿಯಪ್ಪ ಮಾದರ ಅವರು ಐಐಟಿ ಮದ್ರಾಸ್‌ಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು. ಕರಿಯಪ್ಪ ಮಾದರ ಹಾಗೂ ಅವರ ತಾಯಿ ದ್ಯಾಮವ್ವ ಅವರನ್ನು ಸನ್ಮಾನಿಸಲಾಯಿತು.
ಗುರುಸಿದ್ಧೇಶ್ವರ ಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ. ವಿ.ಎ. ಬೆನಕನಾಳ ಹಾಗೂ ಪ್ರಾಚಾರ್ಯ ನೀಲಪ್ಪ ಗಾಣಿಗೇರ ಮಾತನಾಡಿದರು.
ಪ್ರೊ. ಚಂದ್ರಶೇಖರ ಹೆಗಡೆ, ಮಲ್ಲಿಕಾರ್ಜುನ ತಾಂಡೂರ, ಶ್ರೀಕಾಂತ ಹುನಗುಂದ, ಮುರಗೇಶ ಶೇಖಾ, ಸುಭಾಷ ತೊಗರಿ, ನಿಂಗಪ್ಪ ಅಲದಿ, ನಿಂಗಪ್ಪ ಯಣ್ಣಿ, ವಿಠ್ಠಲ ಬದಿ, ಮಹಾಂತೇಶ ಸಿಂದಗಿ, ಸಾಗರ ರಾಜನಾಳ, ಗಂಗಾಧರ ಪತ್ತಾರ ಸೇರಿ ಹಲವರು ಉಪಸ್ಥಿತರಿದ್ದರು.