ನಮ್ಮ ಸಂಸ್ಕೃತಿ ಯುವ ಜನತೆಗೆ ಮಾದರಿಯಾಗಲಿ

ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಭಾನುವಾರ ಬಸವೇಶ್ವರ ದೈವ ಮಂಡಳಿ ಸಂಯುಕ್ತಾಶ್ರಯದಲ್ಲಿ ಡಾ. ವಿಜಯಲಕ್ಷ್ಮೀ ಇಟ್ಟಣ್ಣವರ ಬರೆದ ಸಾಮರಸ್ಯ ರೊಳ್ಳಿ ಮೊಹರಂ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಂಥವನ್ನು ಡಾ. ವಿಜಕುಮಾರ ಕಟಗಿಹಳ್ಳಿಮಠ ಬಿಡುಗಡೆ ಮಾಡಿದರು. ಚನ್ನಯ್ಯ ಹಿರೇಮಠ, ಶಿವಾನಂದ ನಿಂಗನೂರ, ಡಾ. ಶ್ರೀರಾಮ ಇಟ್ಟಣ್ಣವರ, ಶಬ್ಬೀರ ಡಾಂಗೆ ಇತರರಿದ್ದರು.
ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಭಾನುವಾರ ಬಸವೇಶ್ವರ ದೈವ ಮಂಡಳಿ ಸಂಯುಕ್ತಾಶ್ರಯದಲ್ಲಿ ಡಾ. ವಿಜಯಲಕ್ಷ್ಮೀ ಇಟ್ಟಣ್ಣವರ ಬರೆದ ಸಾಮರಸ್ಯ ರೊಳ್ಳಿ ಮೊಹರಂ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಂಥವನ್ನು ಡಾ. ವಿಜಕುಮಾರ ಕಟಗಿಹಳ್ಳಿಮಠ ಬಿಡುಗಡೆ ಮಾಡಿದರು. ಚನ್ನಯ್ಯ ಹಿರೇಮಠ, ಶಿವಾನಂದ ನಿಂಗನೂರ, ಡಾ. ಶ್ರೀರಾಮ ಇಟ್ಟಣ್ಣವರ, ಶಬ್ಬೀರ ಡಾಂಗೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ವಿಜಕುಮಾರ ಕಟಗಿಹಳ್ಳಿಮಠ ಹೇಳಿಕೆ
  • ಸಾಮರಸ್ಯ ರೊಳ್ಳಿ ಮೊಹರಂ ಗ್ರಂಥ ಲೋಕಾರ್ಪಣೆ
ಬೀಳಗಿ: ಮೊಹರಂ ಆಚರಣೆಗೆ ಸುಮಾರು ಎಂಟನೂರು ವರ್ಷಗಳ ಚರಿತ್ರೆಯಿದೆ. ಹಬ್ಬದಲ್ಲಿ ಯವುದೇ ಜಾತಿ, ಮತ, ಪಂಥ ಇಲ್ಲದೇ ಭಕ್ತಿ ಭಾವೈಕ್ಯ ಸಾರುವ ಹಬ್ಬ ಇದಾಗಿದೆ ಎಂದು ಬಾಗಲಕೋಟೆ ಬಿಬಿವಿ ಸಂಘದ ಆಡಳಿತಾಧಿಕಾರಿ ಡಾ. ವಿಜಕುಮರ ಕಟಗಿಹಳ್ಳಿಮಠ ಹೇಳಿದರು.
ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಭಾನುವಾರ ಬಸವೇಶ್ವರ ದೈವ ಮಂಡಳಿ ಸಂಯುಕ್ತಾಶ್ರಯದಲ್ಲಿ ಡಾ. ವಿಜಯಲಕ್ಷ್ಮೀ ಇಟ್ಟಣ್ಣವರ ಬರೆದ ಸಾಮರಸ್ಯ ರೊಳ್ಳಿ ಮೊಹರಂ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಮಾಡಿಕೊಂಡು ಬಂದ ಆಚಾರ- ವಿಚಾರಗಳು ಹಾಗೂ ನಮ್ಮ ಸಂಸ್ಕೃತಿ ಪರಂಪರೆ ಇಂದಿನ ಯುವ ಜನತೆಗೆ ಮೂಡಿಸುವ ಕೆಲಸ ನಡೆಯಬೇಕಾಗಿದೆ. ಅಲ್ಲದೇ ನಮ್ಮ ಗ್ರಾಮಗಳ ನಡೆದು ಬಂದ ದಾರಿಗಳ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಉಳಿದರೆ ಅದು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿದೆ ಎಂದು ಹೇಳಿದರು.
ಗ್ರಾಮದ ಹಿರಿಯರಾದ ಶಿವಾನಂದ ನಿಂಗನೂರ ಮಾತನಾಡಿ, ನಮ್ಮ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಹಾಗೂ ಇಲ್ಲಿನ ದೇವರ ಪವಾಡಗಳ ಶಕ್ತಿಯಿಂದ ಮಾತ್ರ ಸಾಧ್ಯವಾಗಿದೆ. ಅಲಾಯಿ ದೇವರ ಹಬ್ಬಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ಭಕ್ತರು ಬಂದು ಇಲ್ಲಿ ಸೇವೆ ಮಾಡುತ್ತಾರೆ ಎಂದರು.
ಡಾ. ವಿಜಯಲಕ್ಷ್ಮೀ ಇಟ್ಟಣ್ಣವರ ಮಾತನಾಡಿ, ರೊಳ್ಳಿ ಗ್ರಾಮದ ಮೊಹರಂ ಅಚರಣೆ, ಚರಿತ್ರೆ ಪುಸ್ತಕ ಬರೆಯಲು ಅಲ್ಲಿಯ ದೇವರ ಶಕ್ತಿಯಿಂದ ಸಾಧ್ಯವಾಗಿದ್ದು ಇದು ಪುಣ್ಯ ಎಂದರು.
ಬಸವೇಶ್ವರ ದೈವ ಮಂಡಳಿ ಗೌರವ ಅಧ್ಯಕ್ಷ ಚನ್ನಯ್ಯ ಹಿರೇಮಠ ಉದ್ಘಾಟಿಸಿದರು.
ಡಾ. ಶ್ರೀರಾಮ ಇಟ್ಟಣ್ಣವರ, ಸರೋಜಾ ಇಟ್ಟಣ್ಣವರ, ಸನದಿ ಹುಸೇನಸಾಬ, ಕೆ. ದೊಡಮನಿ, ದಸ್ತಗ್ರಿಸಾಬ, ಡೋಂಗ್ರೀಸಾಬ ಟಗರಣ್ಣವರ, ಕಾಸಿಂಸಾಬ ಟಗರಣ್ಣವರ, ಚಂದ್ರಶೇಖರ ಕಾಖಂಡಕಿ, ಸಾಹಿತಿ ಗುರುರಾಜ ಲೂತಿ, ಕಲಾವಿದರಾದ ಮೂಡಲಗಿ ಶಬ್ಬೀರ ಡಾಂಗೆ, ಮಲ್ಲೇಶ ಪೂಜಾರಿ, ಆರ್.ಜಿ. ನಬಿವಾಲೆ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net