ಬರಪೀಡಿತವೆಂದು ಘೋಷಣೆ ಮಾಡಲಿ

ತಿಕೋಟಾ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಂಗೀತಾ ರಾಠೋಡ, ರೇಖಾ ಲಕ್ಷ್ಮಣ ಹಿಟ್ನಳ್ಳಿ, ಅನಸೂಯಾ ಪ್ರಕಾಶ ಬಡಿಗೇರ ಮತ್ತಿತರರಿದ್ದರು.
ತಿಕೋಟಾ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಂಗೀತಾ ರಾಠೋಡ, ರೇಖಾ ಲಕ್ಷ್ಮಣ ಹಿಟ್ನಳ್ಳಿ, ಅನಸೂಯಾ ಪ್ರಕಾಶ ಬಡಿಗೇರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ತಾಲೂಕು ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಆಗ್ರಹ
  • ತಹಸೀಲ್ದಾರಿಗೆ ಮನವಿ
ತಿಕೋಟಾ:

ಮುಂಗಾರಿ ಮತ್ತು ಹಿಂಗಾರು ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ತಿಕೋಟಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಆಗ್ರಹಿಸಿದರು.


ಬಸವೇಶ್ವರ ವೃತ್ತದಲ್ಲಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಿಕೋಟಾ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು, ರೈತರ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿದ್ದು, ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಮುಖ್ಯಮಂತ್ರಿಗಳು ರೈತರ ನೆರವಿಗೆ ಬರಬೇಕು. ರೈತರ ಕಷ್ಟವನ್ನು ಅರ್ಥಮಾಡಿಕೊಂಡು ಬೆಳೆಸಾಲ ಮನ್ನಾ ಮಾಡಿ, ಬರ ಪರಿಹಾರ ಘೋಷಿಸಿ, ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಒಂದು ವೇಳೆ ತಿಕೋಟಾ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೊಷಣೆ ಮಾಡದಿದ್ದರೆ ರಾಜ್ಯ ರೈತ ಸಂಘ ಹಾಗೂ ಹಸಿರು ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಯೊಂದಿಗೆ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಅಧ್ಯಕ್ಷೆ ಸಂಗೀತಾ ರಾಠೋಡ, ರೇಖಾ ಲಕ್ಷ್ಮಣ ಹಿಟ್ನಳ್ಳಿ, ಅನಸೂಯಾ ಪ್ರಕಾಶ ಬಡಿಗೇರ, ಮಾಯವ್ವ ಉಪ್ಪಾರ, ರೈತ ಮುಖಂಡರಾದ ಶಾನೂರ ನಂದರಗಿ, ಹನಮಂತ ಬ್ಯಾಡಗಿ, ಧರೆಪ್ಪ ಅನಂತಪೂರ, ಶಿವಪ್ಪ ಪಟ್ಟಣಶೇಟ್ಟಿ, ಮೋಶಿನ ಮುಜಾವರ, ಸುರೇಶ ಕೋಣ್ಣೂರ, ರವಿಕಿರಣ ಹೊಸೂರ, ಅಬ್ದೂಲಗಣಿ ದಾಶ್ಯಾಳ, ಬುಳ್ಳಪ್ಪ ಪೂಜಾರಿ, ಶಿವಾನಂದ ಅಂಕಲಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net