Let humanity repay its debt to society by protecting the environment.
Published on:
Copied
Follow Us
ತುರುವೇಕೆರೆ: ಆಧ್ಯಾತ್ಮವೆನ್ನುವುದು ಕೇವಲ ಮಂತ್ರಪಠಣ ಅಥವಾ ಧ್ಯಾನ ಕೇಂದ್ರಿತವಾಗಿಲ್ಲ. ಕರ್ಮದ ಮೂಲಕವೂ ಒಬ್ಬ ವ್ಯಕ್ತಿ ಅಪ್ರಜ್ಞಾಪೂರ್ವಕವಾಗಿಯೂ ಆಧ್ಯಾತ್ಮದ ಸ್ಥಿತಿ ತಲುಪಬಹುದು ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಉಪಾಧ್ಯಕ್ಷ ದಿನೇಶ್ ಕಾಮತ್ ಹೇಳಿದರು.
ಪಟ್ಟಣದ ಗಾಯತ್ರಿ ಭವನದಲ್ಲಿ ನಾರಾಯಣಶಾಸೀ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸವಾಜ ಸೇವಕ ದಿ. ಟಿ.ಎನ್. ಸುಬ್ರಹ್ಮಣ್ಯಶಾಸಿ ಸಂಸ್ಮರಣಾ ಸಭೆಯಲ್ಲಿ ವಾತಾಡಿದ ಅವರು, ಮನುಷ್ಯ ತನ್ನೊಂದಿಗೆ ಹಲವಾರು ಋಣಗಳನ್ನು ತಂದಿರುತ್ತಾನೆ. ಅವನ್ನು ವಾಪಸ್ ಸವಾಜಕ್ಕೆ ನೀಡಬೇಕಾದದ್ದು, ಪ್ರತಿಯೊಬ್ಬನ ಕರ್ತವ್ಯ ಎಂದರು.
ದೇಶಪ್ರೇಮ, ದೀನರ ಸೇವೆ, ಪರಂಪರೆಯ ಸ್ಮರಣೆ, ಸಂಸ್ಕೃತಿ ಇತಿಹಾಸ, ಪರಿಸರದ ಸಂರಕ್ಷಣೆ ಇವುಗಳ ಮೂಲಕ ಮನುಷ್ಯ ಸವಾಜದ ಋಣ ತೀರಿಸಬೇಕು ಎಂದರು.
ಟಿ.ಎನ್. ಪ್ರಭಾಕರ್, ಟಿ.ಆರ್. ಆನಂದ್, ಟಿ.ಕೆ.ಶ್ರೀಧರ್ ಪಂಡಿತ್,ಟಿ.ಆರ್.ಶ್ರೀಧರ್, ಟಿ.ಎನ್. ಸರಸ್ವತೀ, ಟಿ.ಎನ್. ರಾಮಕೃಷ್ಣ, ಟಿ.ಎಚ್.ವಿಶ್ವಾರಾಧ್ಯ, ನಟರಾಜ ಪಂಡಿತ್, ಟಿ.ಆರ್.ಶ್ರೀನಿವಾಸ್, ರವಿ ಜೋಯಿಸ್ ಇದ್ದರು.