ಜಾನಪದ ಸಾಹಿತ್ಯ ದಾಖಲೀಕರಣವಾಗಲಿ / DODABALLAPUR

ದೊಡ್ಡಬಳ್ಳಾಪುರದ ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸತ ಹಿರಿಯ ಡೋಲು ಕಲಾವಿದ ಎಂ.ವೆಂಕಟರಾಜು ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್​.ರಾಮಾಂಜಿನಪ್ಪ, ಗೌರವ ಅಧ್ಯಕ್ಷ ಎನ್​.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್​, ಖಜಾಂಚಿ ಮುನಿಪಾಪಯ್ಯ, ಸಹ ಕಾರ್ಯದರ್ಶಿ ಎ.ಮಂಜುನಾಥ್​, ಹಿರಿಯ ರಂಗ ಕಲಾವಿದ ಶಿವರಾಜ್​, ಸಲಹಾ ಸಮಿತಿ ಸದಸ್ಯ ಎನ್​.ವೆಂಕಟೇಶ್​ ಇದ್ದರು.

Published on
ದೊಡ್ಡಬಳ್ಳಾಪುರ : ಜಾನಪದ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಜಾನಪದ ಗಾಯಕರ ಹಾಡುಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಬೇಕಾದ ಅಗತ್ಯವಿದ್ದು, ಕಲಾವಿದರ ಸಂಘಗಳು ಈ ಕಾರ್ಯಕ್ಕೆ ಕೈಜೋಡಿಸಬೇಕಿದೆ ಎಂದು ಕನ್ನಡ ಮತ್ತು ಸಂಸತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್​ ಹೇಳಿದರು.
ತಾಲೂಕು ಕಲಾಭವನದಲ್ಲಿ ಕಲಾವಿದರ ಸಂಘ ಮತ್ತು ಕನ್ನಡ ಸಂಸತಿ ಇಲಾಖೆಯಿಂದ ಚನ್ನಕೇಶವ ಸಾಂಸತಿಕ ಕಲಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಪ್ರಿಯವಾಗಿರುವ ಹಲವು ಜನಪದ ಹಾಡುಗಳು ದಾಖಲಾಗಿ ಜನರ ಬಾಯಲ್ಲಿ ಹರಿದಾಡುತ್ತಿವೆ. ಆದರೆ ಲಾವಣಿಗಳು, ಹಂತಿ ಪದಗಳು, ಸೋಬಾನೆ ಪದಗಳು ಮತ್ತು ಬೀಸುವ ಪದಗಳು ಮೊದಲಾದ ಮೂಲ ಜಾನಪದ ಹಾಡುಗಳ ಸಾಕಷ್ಟು ದಾಖಲೀಕರಣವಾಗದೇ ದೂರ ಉಳಿದಿವೆ. ಹಳ್ಳಿಗಳಲ್ಲಿ ಇಂದಿಗೂ ನೂರಾರು ಜನಪದ ಗಾಯಕರಿದ್ದಾರೆ. ಅವರನ್ನು ಸಂಪರ್ಕಿಸಿ, ಅವರಿಂದ ಹಾಡುಗಳನ್ನು ಹಾಡಿಸಿ, ಧ್ವನಿ ಮುದ್ರಣ ಹಾಗೂ ಅಕ್ಷರ ರೂಪದಲ್ಲಿ ದಾಖಲೀಕರಿಸಬೇಕಿದೆ. ಕಲಾವಿದರ ಸಂಘಗಳು ಇಂತಹ ಕಲಾವಿದರನ್ನು ಗುರುತಿಸಿ ಮಾಹಿತಿ ಸಂಗ್ರಹಿಸಬೇಕಿದೆ ಎಂದರು.
ಹಿರಿಯ ಡೋಲು ಕಲಾವಿದ ಎಂ.ವೆಂಕಟರಾಜು ಮಾತನಾಡಿ, ಕಲಾವಿದರು ಕಲೆಗೆ ಅರ್ಪಿಸಿಕೊಂಡಾಗ ಪರಿಪೂರ್ಣ ಕಲಾವಿದರಾಗಲು ಸಾಧ್ಯ. ಮೇರು ಕಲಾವಿದರ ಸಾಧನೆಗೆ ಅವರ ಶ್ರದ್ಧೆ ಪರಿಶ್ರಮಗಳೇ ಕಾರಣ. ಕಲಾವಿದರು ಭಾಷೆ ಉಚ್ಚಾರಣೆ, ಸಾಹಿತ್ಯದ ಕಡೆ ಗಮನ ನೀಡಿದರೆ ಪ್ರೇಕ್ಷಕರ ಮನ ಮುಟ್ಟುತ್ತದೆ. ಕಲಾಶ್ರೀ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ ಸರ್ಕಾರಕ್ಕೆ ಹಾಗೂ ಇದಕ್ಕೆ ಶಿಪಾರಸ್ಸು ಮಾಡಿ ನಮ್ಮನ್ನು ಪ್ರೋತ್ಸಾಹಿಸಿದ ಎಲ್ಲ ಕಲಾವಿದ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಂಘದ ನಿರ್ದೇಶಕರಾದ ಅಶ್ವತ್ಥಪ್ಪ, ಗಂಗಮ್ಮ, ಜಿ.ರಾಮು, ಅಶ್ವತ್ಥನಾರಾಯಣ, ನಾಗರಾಜ್​, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಇತರರು ಇದ್ದರು.
ದಾಖಲೆ ಸಂಗ್ರಹಿಸಿ : ಜಿಲ್ಲೆಯಲ್ಲಿಯೇ ಅತಿಹೆಚ್ಚು ಮಾಸಾಶನ ಪಡೆಯುವ ಕಲಾವಿದರಿದ್ದು, ಕಲೆಗೆ ಉತ್ತೇಜನ ದೊರೆಯುತ್ತಿರುವುದು ಸಂತಸದ ವಿಚಾರ. ಕಲಾವಿದರು ಯಾವುದೇ ಕಾರ್ಯಕ್ರಮ ನೀಡಲಿ ಅದರ ಫೋಟೋ, ಪ್ರಮಾಣ ಪತ್ರ ದಾಖಲೆ ಹೊಂದಿದ್ದರೆ ಮುಂದೆ ಮಾಸಾಶನ ಹಾಗೂ ಪ್ರಶಸ್ತಿ ಪಡೆಯಲು ಅನುಕೂಲವಾಗುತ್ತದೆ ಡಿ.ಎಂ.ರವಿಕುಮಾರ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net