ಮುರಗೋಡ: ಜಾತಿ ಮತ ಪಂಥ ಬದಿಗೊತ್ತಿ ರೈತರನ್ನು ಎಲ್ಲರೂ ಗೌರವಿಸೋಣ ಎಂದು ರಾಜ್ಯ ರೈತಸಂದ ಗೌರವಾಧ್ಯ ಶಶಿಕಾಂತ ಗುರೂಜೀ ಹೇಳಿದರು. ಸಮೀಪದ ಸೋಗಲ ೇತ್ರದ ಶಿವಯೋಗೀಶ್ವರ ಸಭಾಭವನದಲ್ಲಿ ಈಚೆಗೆ ರಾಜ್ಯ ರೈತಸಂ ಹಾಗೂ ಹಸಿರುಸೇನೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ರೈತ ಹಿತಚಿಂತಕ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರಿಗೆ ರೈತರು ಸಹಕರಿಸಿದರೆ ಮುಂಬರುವ ದಿನಗಳಲ್ಲಿ ರೈತರಿಗೆ ಒಳ್ಳೆಯ ಭವಿಷ್ಯ ಇದೆ ಎಂದರು. ಈ ಸಂದರ್ಭದಲ್ಲಿ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿಂಗಯ್ಯ ಪೂಜಾರ ಪ್ರಭುಲಿಂಗಯ್ಯ ಕುರುಬಗಟ್ಟಿಮಠ, ಗುರುಸ್ವಾಮಿ ಹೊಸಪೇಟಿಮಠ, ರಾಜ್ಯ ಕಾರ್ಯಾಧ್ಯ ಬಸವರಾಜ ಬಿಜ್ಜೂರ, ಸತ್ಯಪ್ಪ ಮಲ್ಲಾಪುರೆ, ಸಿಂಧೂರ ತೆಗ್ಗಿ, ಯಲ್ಲನಾಯ್ಕ ನಾಯ್ಕರ, ಮಂಜುನಾಥ ವಣ್ಣೂರ, ಬಸಯ್ಯ ಗುಡದೂರ, ವೀರೇಶ ಮಲ್ಲನವರ, ಶಂಕ್ರಪ್ಪ ಪೆಂಟೇದ, ಬಸವರಾಜ ಹಾರುಗೊಪ್ಪ, ಯಲ್ಲಪ್ಪ ವಣ್ಣೂರ, ಈರಯ್ಯ ಕೊರಿಕೊಪ್ಪ ಇತರರಿದ್ದರು.