ನೌಕರರಿಗೆ ಆರೋಗ್ಯ ಸೇವೆ ಸಿಗಲಿ Employee

ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸಾವಿತ್ರಿಬಾಯಿ ಪುಲೆ ಜಯಂತಿಯನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್​ ಉದ್ಘಾಟಿಸಿದರು. Employee
ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸಾವಿತ್ರಿಬಾಯಿ ಪುಲೆ ಜಯಂತಿಯನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್​ ಉದ್ಘಾಟಿಸಿದರು. Employee
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್​ ಹೇಳಿಕೆ
ಶ್ರೀನಿವಾಸಪುರ: ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ Employee ಯೋಜನೆ ನಮ್ಮ ಕೋಲಾರ ಜಿಲ್ಲೆಯಲ್ಲಿ 30 ಹಾಸಿಗೆಗಳಿರುವ ಪ್ರತಿ ಆಸ್ಪತ್ರೆಯಲ್ಲೂ ನೌಕರರಿಗೆ ಲಭ್ಯವಾಗಲು ಶ್ರಮಿಸುತ್ತೇನೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್​ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ತಾಲೂಕು ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯಾಗಾರ, 2026ನೆ ಸಾಲಿನ ನೂತನ ವರ್ಷದ ಕ್ಯಾಲೆಂಡರ್​ ಬಿಡುಗಡೆ, ಸಾವಿತ್ರಿಬಾಯಿ ಜಯಂತಿಯಲ್ಲಿ ಮಾತನಾಡಿ, ನಮ್ಮ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನಿರಂತರ ಹೋರಾಟದ ಲವಾಗಿ ಆರೋಗ್ಯ ಸಂಜೀವಿನಿ ಭಾಗ್ಯ ಜಾರಿಯಾಗಿದ್ದು, ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ತಾಲೂಕು ಮತ್ತು ನಮ್ಮ ಜಿಲ್ಲೆಯ ಪ್ರತಿಷ್ಠಿತ ಎಲ್ಲ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ನೌಕರರರಿಗೆ ಚಿಕಿತ್ಸೆ ದೊರಕಲು ಶ್ರಮಿಸುತ್ತೇವೆ ಎಂದರು.
ಕಾರ್ಯನಿರ್ವಹಣಾಧಿಕಾರಿ ಸರ್ವೇಶ್​ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ತರಬೇತಿಗಳು, ಸಭೆಗಳು, ಹೊಸ ಹೊಸ ಯೋಜನೆಗಳು ಹೆಚ್ಚಾಗುತ್ತಿವೆ. ಸಿಬ್ಬಂದಿ ಕೊರತೆ ಇದೆ. ಇವೆಲ್ಲವನ್ನೂ ಮೀರಿ ಆತ್ಮಸ್ಥೆ$ರ್ಯದಿಂದ ನಾವು ಕೆಲಸ ಮಾಡಬೇಕು. ನಮ್ಮ ಕೆಲಸದ ಒತ್ತಡ, ನಮ್ಮ ಸಹಪಾಠಿ ನೌಕರರು ಜವಾಬ್ದಾರಿ ವಹಿಸಿಕೊಳ್ಳಬೇಕು. ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದರು.
ನೌಕರರ ಸಂಘದ ಖಜಾಂಚಿ ಮುಲ್ಲಳ್ಳಿ ವೆಂಕಟೇಶ್​ ಅವರು ಸಭೆಯ ವಾರ್ಷಿಕ ಖರ್ಚು ವೆಚ್ಚಗಳನ್ನು ಮಂಡಿಸಿದರು.
ತಾಲೂಕಿನ ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಶ್ರಮಿಸಿದ ಸುಮಾರು 10 ಶಿಕ್ಷಕಿಯರಿಗೆ ಶಿಕ್ಷಕರಿಗೆ ಸಾವಿತ್ರಿ ಬಾಯಿಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೌಕರರ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಎಂ.ಬೈರೇಗೌಡ, ಚಿಂತಾಮಣಿ ತಾಲೂಕು ಅಧ್ಯಕ್ಷ ಅಶೋಕ್​, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೆಡ್ಡೆಪ್ಪ, ಜಿಲ್ಲಾ ಖಜಾಂಚಿ ಎಂ. ಶಿವಣ್ಣ, ತಾಲೂಕು ಖಜಾಂಚಿವೇಣುಗೋಪಾಲ, ಉಪ ಖಜಾನಾಧಿಕಾರಿ ವೀಣಾ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುರಳೀಬಾಬು, ಎಸ್​ಸಿ&ಎಸ್​ಟಿ ಸಮನ್ವಯ ನೌಕರರ ಸಂಘದ ಅಧ್ಯಕ್ಷ ಮುನಿವೆಂಕಟಪ್ಪ, ಸಿಡಿಪಿಒ ಬೈರಾರೆಡ್ಡಿ, ಇಂಜಜಿನಿಯರ್​ಗಳಾದ ಸುನೀತಾ, ಮಂಜುನಾಥ್​, ಸುರೇಶ್​ ಇತರರು ಇದ್ದರು.
ಜಿಲ್ಲಾ ಅಧ್ಯಕ್ಷರಿಗೆ ದೂರು: ಸಭೆಯಲ್ಲಿ ಪಟ್ಟಣದ ವಾಸಿ 2013ರಲ್ಲಿ ಭವನದಲ್ಲಿ ಒಂದು ಕೊಠಡಿಯನ್ನು ನನಗೆ ಲೀಸ್​ ಬರೆದು ಕೊಟ್ಟಿದ್ದು, ನನ್ನಿಂದ 4.25 ಲಕ್ಷ ರೂ. ನಗದು ಅಂದಿನ ಅಧ್ಯಕ್ಷ ಬಂಗವಾದಿ ಎಂ. ನಾಗರಾಜ್​ ಪಡೆದಿರುತ್ತಾರೆ. ನಮಗೆ ಹಣವನ್ನಾದರೂ ವಾಪಸ್​ ಕೊಡಿಸಿ, ಇಲ್ಲವಾದಲ್ಲಿ ಕೊಠಡಿಯಲ್ಲಿ ಹೋಟೆಲ್​ ನಡೆಸಲು ಅವಕಾಶ ಮಾಡಿಕೊಡಿ ಎಂದು ತಾಲೂಕು ಮತ್ತು ಜಿಲ್ಲಾ ಅಧ್ಯಕ್ಷರಿಗೆ ರವಿ ಕುಮಾರ್​ ಕುಟುಂಬದವರು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net