ಹುಳಿಯಾರು:ಮಕ್ಕಳು ಕೇವಲ ಅಂಕಗಳನ್ನು ಗಳಿಸುವ ಯಂತ್ರಗಳಾಗಬಾರದು, ಅವರು ಉತ್ತಮ ಸಂಸ್ಕಾರವಂತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಶಿಣ ಎಂಬುದು ಕೇವಲ ಜೀವನೋಪಾಯಕ್ಕಲ್ಲ, ಅದು ಜೀವನದ ಸಾರ್ಥಕತೆಗಾಗಿ ಇರಬೇಕು ಎಂದು ಶಿಣ ತ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯಿಂದ ಆಯೋಜಿಸಿದ್ದ ವಾಸವಿ ಪ್ರಗತಿ ಪರ್ವ 2025-&26 ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಕ್ಕಳಿಗೆ ಶಾಲೆಯಲ್ಲಿ ಕಲಿತ ಪಾಠಗಳಿಗಿಂತ ಮನೆಯಲ್ಲಿ ಸಿಗುವ ಸಂಸ್ಕಾರ ಬಹಳ ಮುಖ್ಯ. ತಂದೆ&ತಾಯಿಯರನ್ನು ಗೌರವಿಸುವ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಮಕ್ಕಳನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಮಕ್ಕಳು ಮನೆಯಲ್ಲಿ ಮಾತಿಗಿಂತ ಹೆಚ್ಚಾಗಿ ಪೋಷಕರ ನಡವಳಿಕೆ ಗಮನಿಸಿ ಕಲಿಯುತ್ತಾರೆ. ನಾವು ಸುಳ್ಳು ಹೇಳುತ್ತಾ ಮಗುವಿಗೆ ಸತ್ಯವಂತನಾಗು ಎಂದು ಹೇಳಿದರೆ ಅದು ಸಾಧ್ಯವಿಲ್ಲ. ಮಗು ಶಾಲೆಗೆ ಹೋಗುವುದು ಕೇವಲ ಅರ ಕಲಿಯಲು. ಆದರೆ ಬದುಕನ್ನು ಕಲಿಯುವುದು ಮನೆಯಲ್ಲಿ. ಶಿಕರು ಸಹ ಕೇವಲ ಮಾಹಿತಿ ನೀಡುವವರಲ್ಲ, ಅವರು ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದರು.
ಬೆಂಗಳೂರಿನ ಕಾರ್ತಿಕ್ ನೇತ್ರಾಲಯದ ವೈದ್ಯ ಡಾ.ಎಂ.ಎಸ್.ರವೀಂದ್ರ ಮಾತನಾಡಿ, ಆಧುನಿಕ ಯುಗದಲ್ಲಿ ಮಕ್ಕಳು ಸದಾ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ಗಳ ಮುಂದೆ ಕುಳಿತುಕೊಳ್ಳುತ್ತಿರುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನಿಷ್ಠ 9 ವರ್ಷ ತುಂಬುವವರೆಗೂ ಮಕ್ಕಳಿಗೆ ಮೊಬೈಲ್ ನೀಡಬಾರದು. ಅದರಿಂದ ಹೊರಹೊಮ್ಮುವ ವಿಕಿರಣಗಳು ಮತ್ತು ಅದರ ಬೆಳಕಿನ ಪ್ರಭಾವ ಮಕ್ಕಳ ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳು ಅಳುತ್ತಿದ್ದಾರೆಂದು ಅಥವಾ ಅವರನ್ನು ಸಮಾಧಾನಪಡಿಸಲು ಮೊಬೈಲ್ ನೀಡುವುದು ಸರಿಯಲ್ಲ. ಪ್ರತಿದಿನ ಕನಿಷ್ಠ ಎರಡು ಗಂಟೆಗಳ ಕಾಲ ಮಕ್ಕಳನ್ನು ನಾಲ್ಕು ಗೋಡೆಗಳಿಂದ ಹೊರಗೆ ಕರೆತಂದು, ಬಯಲು ವಾತಾವರಣದಲ್ಲಿ ಆಟವಾಡಲು ಬಿಡಬೇಕು ಎಂದು ಸಲಹೆ ನೀಡಿದರು.
ಕಾರ್ಯದರ್ಶಿ ಬಾಲಾಜಿ, ಟ್ರಸ್ಟಿಗಳಾದ ಬಿ.ಆರ್.ಪ್ರದಿಪ್, ಕಾರ್ತಿಕ್, ನಾಗೇಶ್, ವೇಣುಗೋಪಾಲ್, ಟಿ.ಎಸ್.ಪ್ರಶಾಂತ್, ಸುದೀರ್, ಭದ್ರೀಶ್, ಅಭಿಷೇಕ್, ಮೇಘಾ, ಪೂನಂ, ಸಂಕೀರ್ತನಾ, ಕಾವ್ಯಾ, ಲಕ್ಷಿ$್ಮ, ವಿದ್ಯಾ, ರೇಷ್ಮಾ, ಲಕ್ಷಿ$್ಮ, ಆಂಗ್ಲ ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್ ಮತ್ತಿತರರು ಇದ್ದರು.