ಸಿದ್ದರಾಮಯ್ಯ ಬಳಿ ಬಿಎಸ್‌ವೈ ಟ್ಯೂಶನ್ ಹೋಗಲಿ

ಹೊಸಪೇಟೆಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಗ್ಯಾರೆಂಟಿ ಉತ್ಸವ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ಎಸ್.ಆರ್.ಮೆಹರೂಜ್ ಖಾನ್, ಸೂರಜ್ ಎಂ.ಎನ್.ಹೆಗಡೆ, ಡಾ.ಪುಷ್ಪಾ ಅಮರನಾಥ, ಜಿಲ್ಲಾ ಅಧ್ಯಕ್ಷ ಕುರಿ ಶಿವಮೂರ್ತಿ, ಹುಡಾ ಅದ್ಯಕ್ಷ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಅಕ್ರಂ, ಎಸ್ಪಿ ಎಸ್.ಜಾಹ್ನವಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಂದು ನನ್ನ ಮಾತು ಕೇಳಿದಿದ್ದರೆ ಯಡಿಯೂರಪ್ಪ ದೇವರಾಣೆಗೂ ಜೈಲಿಗೆ ಹೋಗ್ತಿರಲಿಲ್ಲ
  • ಸಿಎಂ ಹುದ್ದೆ ಸಾಮಾನ್ಯ ಅಲ್ಲ
  • ಸಾಕಷ್ಟು ಅನುಭವ ಬೇಕು

ಹೊಸಪೇಟೆ: ಸಿಎಂ ಹುದ್ದೆ ಸಾಮಾನ್ಯ ಹುದ್ದೆ ಅಲ್ಲ. ಹುದ್ದೆ ನಿಭಾಯಿಸಲು ಸಾಕಷ್ಟು ಅನುಭವ ಬೇಕಾಗುತ್ತೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಗ್ಯಾರೆಂಟಿ ಉತ್ಸವದ ವೇದಿಕೆಯಲ್ಲಿ ಮಾತನಾಡಿದರು.

ಅನುಭವ ಇಲ್ಲದವರು ಸಿಎಂ ಆಗಲು ಸಾಧ್ಯ ಇಲ್ಲ. ನಾನು ಮೂರನೇ ಬಾರಿ ಸಚಿವನಾಗಿರುವೆ. ಆದರೂ, ನಾನು ಸಿಎಂ ಆಗಲು ಸಾದ್ಯ ಇಲ್ಲ. ಸಿಎಂ ಸಿದ್ದರಾಮಯ್ಯ ಈಗಾಗಲೇ 11 ಬಜೆಟ್ ಮಂಡನೆ ಮಾಡಿದ ಅನುಭವ ಇದೆ. ಹಿಂದೆ ನಾನು ಜೆಡಿಎಸ್ನಲ್ಲಿ ಇದ್ದಾಗ ಯಡಿಯೂರಪ್ಪ ಸಿಎಂ ಆಗಿದ್ದರು. ಸಚಿವ ಸ್ಥಾನದ ಅನುಭವ ಕೂಡ ಇಲ್ಲದ ಬಿಎಸ್ವೈ ಮುಖ್ಯಮಂತ್ರಿ ಗಾದಿ ಹಿಡಿದರು. ಅಂದು ಸಿದ್ದರಾಮಯ್ಯ ಅವರ ಬಳಿ ಟ್ಯೂಶನ್ ಅಥವ ಮಾರ್ಗದರ್ಶನ ತಗೆದುಕೊಳ್ಳಿ ಎಂದು ಸಲಹೆ ನೀಡಿದೆ. ಅಂದು ನನ್ನ ಮಾತು ಕೇಳಿದಿದ್ದರೆ ಯಡಿಯೂರಪ್ಪ ದೇವರಾಣೆಗೂ ಜೈಲಿಗೆ ಹೋಗ್ತಿರಲಿಲ್ಲ. ಎಂದರು.

ಗ್ಯಾರAಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗಿದಿದ್ದರೆ 9.5 ಸಾವಿರ ಕೋಟಿ ರೂ. ಅನುದಾನ ಸಿಎಂ ಹೇಗೆ ಕೊಟ್ಟರು? ರಾಜ್ಯ ಸರ್ಕಾರ ಅಭಿವೃದ್ಧಿ ಪಥದ ಕಡೆ ಸಾಗುತ್ತಿದೆ. ಬಿಜೆಪಿ ಸಾಧನೆ ಕೇಳಿ ಮತ ಕೇಳಿಲ್ಲ. ಕೇವಲ ಧರ್ಮದ ಹೆಸರಿನಲ್ಲಿ ಕೋಮು ಗಲಭೆ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿಗೆ ಜನರು ಎಂದಿಗೂ ಪೂರ್ಣ ಪ್ರಮಾಣದ ಅಧಿಕಾರ ಕೊಟ್ಟಿಲ್ಲ. ಆದ್ದರಿಂದ ಬಿಜೆಪಿಗೆ ಆಡಳಿತ ಮಾಡುವ ಅನುಭವ ಇಲ್ಲ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಬಳಿ ಯಡಿಯೂರಪ್ಪ ಟ್ಯೂಶನ್ ಹೋಗಲಿ ಅನುಭವ ಆಗುತ್ತದೆ. 2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ಎಸ್.ಆರ್.ಮೆಹರೂಜ್ ಖಾನ್, ಸೂರಜ್ ಎಂ.ಎನ್.ಹೆಗಡೆ, ಡಾ.ಪುಷ್ಪಾ ಅಮರನಾಥ, ಜಿಲ್ಲಾ ಅಧ್ಯಕ್ಷ ಕುರಿ ಶಿವಮೂರ್ತಿ, ಹುಡಾ ಅದ್ಯಕ್ಷ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಅಕ್ರಂ, ಎಸ್ಪಿ ಎಸ್.ಜಾಹ್ನವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net