ಈ ಬರಹವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಕಡಿಮೆ ವೇತನದಿಂದ ಕಂಗೆಟ್ಟಿರುವ ಬಿಜೆಪಿ ಐಟಿ ಸೆಲ್ ಹಾಗೂ ಅದರ ಟ್ರೋಲ್ ಆರ್ಮಿ ಬಗ್ಗೆ ನನಗೆ ಕನಿಕರವಿದೆ. ಬಿಜೆಪಿಯ ಟ್ರೋಲ್ ಆರ್ಮಿ ಇಂತಹ ನಕಲಿ ಮತ್ತು ಅನೈತಿಕ ಕೆಲಸಗಳಿಂದ ನಮ್ಮನ್ನು ಕುಗ್ಗಿಸಬಹುದು ಎಂದು ತಿಳಿದಿದ್ದರೆ ಅದು ಅವರ ಭ್ರಮೆಯಷ್ಟೇ ಎಂದು ಫೇಕ್ ಪೋಸ್ಟ್ ಗೆ ತಿರುಗೇಟು ನೀಡಿದ್ದಾರೆ.