ಜೇವರ್ಗಿ: ತಾಲ್ಲೂಕಿನ ಸೊನ್ನ ಗ್ರಾಮದ ಹೊರವಲಯದ ಎಲ್ಲಮ್ಮ ಕೊಳ್ಳ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೊನ್ನೆ ಕಾಡು ಪ್ರಾಣಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಯನ್ನು ಕೊಂದು ಭೇಟಿಯಾಡಿದ್ದು ಸೊನ್ನ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ, ನಾಯಿಯನ್ನು ಬೇತೆಯಾಡಿದ್ದು ಯಾವ ಪ್ರಾಣಿ ಅನ್ನೋದನ್ನು ಖಚಿತವಾಗಿರಲಿಲ್ಲ, ಆದ್ದರಿಂದ ಇಂದು ಕಲಬುರಗಿ ಜಿಲ್ಲಾ ಅರಣ್ಯಾಧಿಕಾರಿ ಸುಮಿತಕುಮಾರ ಪಾಟೀಲ್, ಅರ್. ಎಫ್. ಓ ಗುರುರಾಜ, ಜೇವರ್ಗಿ ವಲಯ ಅರಣ್ಯಾಧಿಕಾರಿ ಸಚಿನ ಬಿರಾದಾರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪ್ರಾಣಿಯ ಹೆಜ್ಜೆ ಗುರುತು ಆದಾರದ ಮೇಲೆ ಕಾಡು ಪ್ರಾಣಿ ಚಿರತೆಯ ಹೆಜ್ಜೆ ಗುರುತು ಇದಾಗಿದ್ದು, ಆದ್ದರಿಂದ ಗ್ರಾಮಸ್ಥರು ಏಕಾಂಗಿಯಾಗಿ ಜಮೀನಿನಲ್ಲಿ ತಿರುಗಾಡಬಾರದು,ಆದಷ್ಟು ಮುಂಜಾಗೃತೆ ವಹಿಸಬೇಕು, ನಮ್ಮ ಅರಣ್ಯ ಇಲಾಖೆಯ ವತಿಯಿಂದ ಆದಷ್ಟು ಬೇಗನೆ ಚಿರತೆಯನ್ನು ಸೆರೆ ಹಿಡಿಯುತ್ತೇವೆ, ನಾಳೆ ಚಿತ್ತಾಪೂರದಿಂದ ಎಂಟು ಕ್ಯಾಮರಾ, ಚಿಂಚೋಳಿಯಿಂದ ಬೋನ್ ತರಿಸಿ ಯಲ್ಲಮ್ಮನ ಕೊಳ್ಳದ ಸುತ್ತಮುತ್ತಲಿನಲ್ಲಿ ಕ್ಯಾಮರಾ ಅಳವಡಿಸಿ ಬೋನ್ ಅಳವಡಿಸಿ ಚಿರತೆಯನ್ನು ಸೆರೆ ಹಿಡಿಯುವ ಕೆಲಸ ಮಾಡುತ್ತೇವೆ, ಎಂದು ಭರವಸೆ ನೀಡಿದರು, ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಲ್ಲಿಕಾರ್ಜುನ ಬಿರಾದಾರ, ಉಮೇಶ ಮಹಾಜನಶೆಟ್ಟಿ, ಬಸವರಾಜ ಸಲಗರ, ಕಲ್ಲಯ್ಯ ಸ್ವಾಮಿ, ಕಾಸಿಮಸಾಬ್ ಪಿಂಜಾರ, ಮಲ್ಲಪ್ಪ ಮಾಡಗಿ, ಸಿಲೆಮಾನ್ ಪಿಂಜಾರ, ರಾಜು ದಂಡಗುಂಡ ಸೇರಿದಂತೆ ಅನೇಕರಿದ್ದರು.