_1765559941585.webp?w=480&auto=format%2Ccompress&fit=max)
_1765559941585.webp?w=480&auto=format%2Ccompress&fit=max)
ಚಿಕ್ಕಬಳ್ಳಾಪುರ: ಬೆಳ್ಳಂಬೆಳಿಗ್ಗೆಯೇಚಿರತೆ ಮರಿಯೊಂದು ಗುಡಿಬಂಡೆ ಪಟ್ಣಣದ ಪೊಲೀಸ್ ವಸತಿ ಗೃಹ ಪ್ರದೇಶಗಳಲ್ಲಿ ಕಂಡಿದ್ದು ತಾಯಿಯಿಂದ ತಪ್ಪಿಸಿಕೊಂಡುಬಂದು ಕಟ್ಟಡಗಳ ನಡುವೆ ಓಡಾಡುತ್ತಿದ್ದದ್ದನ್ನು ಸುರಕ್ಷಿತವಾಗಿ ಬನ್ನೆರುಘಟ್ಟ ಅರಣ್ಯ ಪ್ರದೇಶಕ್ಕೆಸಾಗಿಸಿ, ಜೀವ ಉಳಿಸಲಾಗಿದೆ.
ಇತ್ತೀಚೆಗೆ ಗುಡಿಬಂಡೆಸಮೀಪದ ಕಲ್ಲು ಕ್ವಾರಿಗಳಲ್ಲಿ ಮಿತಿಮೀರಿದ ಬ್ಲಾಸ್ಟಿಂಗ್‌ಗಳಿಂದ ಬೆಟ್ಟಗುಡ್ಡಗಳಲ್ಲಿರುವ ಕಾಡು ಪ್ರಾಣಿಗಳುಭಯದಲ್ಲಿ ವಸತಿ ಪ್ರದೇಶದಲ್ಲಿ ಓಡಾಡುತ್ತಿವೆ. ಜನರಲ್ಲಿ ಆತಂಕ ಮೂಡಿಸುತ್ತಿವೆ. ಅದರಂತೆ ಪೊಲೀಸ್‌ವಸತಿ ಬಡಾವಣೆಯಲ್ಲಿ ಚಿರತೆ ಮರಿ ಕಾಣಿಸಿಕೊಂಡಿದೆ.
ಕೇವಲ ಮರಿ ಮಾತ್ರ ಬಂದಿಲ್ಲ.ಅದರ ಜತೆಗೆ ತಾಯಿಯೂ ಇದ್ದು ಅದು ಇಲ್ಲೇ ಎಲ್ಲೋ ಅಡಗಿರುತ್ತದೆ. ಯಾವುದಕ್ಕಾದರೂ ಎಚ್ಚರಿಕೆಯಿಂದ ಇರಬೇಕು.ಸ್ಥಳದಲ್ಲಿ ತಲಾಶೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
*ನೋಡುಗರು ಶಾಕ್
ಪೊಲೀಸ್ ಪೇದೆ ಸಿಕಿಂದರ್‌ಮುಲ್ಲಾ ಒಮ್ಮೆ ದೂರದಿಂದ ಮರಿ ನೋಡಿ ಶಾಕ್ ಆಗಿದ್ದಾರೆ. ಮೊದಲು ಇದು ಬೆಕ್ಕಾ? ಇಲ್ಲವೇ ಚಿರತೆ ಮರಿನಾ?ಎಂಬ ಗೊಂದಲಕ್ಕೊಳಗಾಗಿದ್ದಾರೆ. ಮೊಬೈಲ್‌ನಲ್ಲಿ ಜೂಮ್ ಮಾಡಿ, ವಿಡಿಯೋ ಸೆರೆ ಹಿಡಿದು ನೋಡಿದಾಗ ಖಾತ್ರಿಯಾಗಿದೆ.ಕಾರಿನಲ್ಲಿ ಅಡಗಿ ಕುಳಿತಿದ್ದ ಮರಿಯನ್ನು ಅರಣ್ಯ ಇಲಾಖೆ, ಬನ್ನರಘಟ್ಟ ಅರಣ್ಯ ಕ್ಷೇತ್ರದ ವೈದ್ಯಾಧಿಕಾರಿಗಳುಸ್ಥಳಕ್ಕೆ ಬಂದು ಬಲೆಯ ಮೂಲಕ ಹಿಡಿದಿದ್ದಾರೆ. ಚಿರತೆ ಮರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕಚಿಕಿತ್ಸೆ ನೀಡಿದ ಬಳಿಕ ಬನ್ನೇರಘಟ್ಟ ಅರಣ್ಯ ವಲಯಕ್ಕೆ ಸಾಗಿಸಲಾಗಿದೆ.