ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರುಗೆ ಉದ್ಯಮಿಗಳಿಂದ ಸನ್ಮಾನ
,
Published on:
Copied
Follow Us
ಕಲಬುರಗಿ: ವಿಧಾನ ಪರಿಷತ್ತಿಗೆ ಮೂರನೇ ಬಾರಿಗೆ ಆಯ್ಕೆ ಹೊಂದಿದ ಕೂಲಿ ಸಮಾಜದ ಹಿರಿಯ ನಾಯಕ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಕಲಬುರ್ಗಿಯಲ್ಲಿ ಉದ್ಯಮಿಗಳು ಸನ್ಮಾನ ಮಾಡಿ ಗೌರವಿಸಿದರು.
ಕಲಬುರಗಿಯ ನಾಗನಹಳ್ಳಿ ವೃತ್ತದ ಹೋಟೆಲ್ ಬೃಂದಾವನ ಗ್ರಾಂಡ್ ನಲ್ಲಿ ಜೂನ್ 23ರಂದು ನಡೆದ ಸನ್ಮಾನ ಸಮಾರಂಭದಲ್ಲಿ ಈಡಿಗ ಸಮಾಜದ ಗುರುಗಳಾದ ಡಾ. ಪ್ರಣವಾನಂದ ಸ್ವಾಮೀಜಿಯವರು ಶಾಲು ಹಾಗೂ ನಾರಾಯಣ ಗುರುಗಳ ಕೃತಿಯನ್ನು ನೀಡಿ ಗೌರವಿಸಿದರು. ತಿಪ್ಪಣ್ಣಪ್ಪ ಕಮಕುನೂರು ಅತಿ ಹಿಂದುಳಿದ ಸಮುದಾಯದ ಪ್ರಬಲ ನಾಯಕನಾಗಿದ್ದು ರಾಜ್ಯದಲ್ಲಿರುವ ಕೋಲಿ ಸಮುದಾಯದ ನಾಯಕನಿಗೆ ಮಂತ್ರಿ ಸ್ಥಾನ ನೀಡಿದರೆ ಸಂವಿಧಾನದ ಆಶಯಕ್ಕೆ ದೊಡ್ಡ ಶಕ್ತಿ ಸಿಗಲಿದೆ ಎಂದು ಉದ್ಯಮಿ ವೆಂಕಟೇಶ ಎಂ ಕಡೇಚೂರ್ ಹೇಳಿದರು. ಅತಿ ಹಿಂದುಳಿದ ಸಮುದಾಯವನ್ನು ಪ್ರತಿನಿಧಿಸುವ ತಿಪ್ಪಣ್ಣಪ್ಪ ಕಮಕನೂರು ವಿಧಾನಪರಿಷತ್ತಿಗೆ ಸದಸ್ಯರಾಗಿರುವುದು ಸಂತಸ ಹಾಗೂ ಅತಿ ಹಿಂದುಳಿದವರಿಗೆ ದೊಡ್ಡ ಬಲ ಬಂದಂತಾಗಿದೆ ಇವರಿಗೆ ಸಚಿವ ಸ್ಥಾನ ಲಭಿಸಿದರೆ ಇನ್ನಷ್ಟು ಉತ್ತಮ ಎಂದು ಡಾ. ಪ್ರಣವಾನಂದ ಶ್ರೀಗಳು ಈ ಸಂದರ್ಭದಲ್ಲಿ ಹೇಳಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಡಾ. ದಯಾನಂದ ತೆಲಂಗ, ಚೇತನ್ ಓಕಳಿ,ಚನ್ನಬಸವ ತೊರವಿ ಮತ್ತಿತರರು ಉಪಸ್ಥಿತರಿದ್ದರು.