ಜಮಖಂಡಿ ನಗರದ ಎಸ್.ಆರ್.ಎ ಕ್ಲಬ್ ನಲ್ಲಿ ರಾಜ್ಯ ವಕೀಲರ ಪರಿಷತ್ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನು ನ್ಯಾಯಾಧೀಶ ಮಹಮ್ಮದ ಇಮ್ತಿಯಾಜ್ ಅಹಮದ್ ಉದ್ಘಾಟಿಸಿದರು. ಬಿ.ವಿ.ಕೋರಿಮಠ, ನಾರಾಯಣಸ್ವಾಮಿ ಜಿ., ಎ.ಪಿ.ಕುಲಕರ್ಣಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನ್ಯಾಯಾಧೀಶ ಮಹಮ್ಮದ ಇಮ್ತಿಯಾಜ್ ಅಹಮದ ಅಭಿಮತ
ಕಾನೂನು ಕಾರ್ಯಾಗಾರ ಆಯೋಜನೆ
ಜಮಖಂಡಿ: ಕಾನೂನು ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳು ಬರುತ್ತವೆ, ಪ್ರತಿದಿನ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು, ಕಾನೂನಿನ ಜ್ಞಾನ ಪಡೆದುಕೊಳ್ಳಲು ಕಾರ್ಯಾಗಾರದ ಅವಶ್ಯಕತೆ ಇದೆ ಎಂದು ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಹಮ್ಮದ ಇಮ್ತಿಯಾಜ್ ಅಹಮದ ಹೇಳಿದರು.
ನಗರದ ಎಸ್‌ಆರ್‌ಎ ಕ್ಲಬ್‌ನಲ್ಲಿ ರಾಜ್ಯ ವಕೀಲರ ಪರಿಷತ್ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ವಿ. ಕೋರಿಮಠ ಮಾತನಾಡಿ, ವಕೀಲರಿಗೆ ಮೂಲ ಬಂಡವಾಳ ಜ್ಞಾನ ಅದನ್ನು ಹಂಚುವ ಕೆಲಸಗಳನ್ನು ವಕೀಲರ ಸಂಘಗಳು ಮಾಡಬೇಕು, ಕಕ್ಷಿದಾರರಿಗೆ ನಿಜವಾದ ನ್ಯಾಯ ಒದಗಿಸಲು ಇಂತಹ ಕಾರ್ಯಾಗಾರದ ಅವಶ್ಯಕತೆ ಇದೆ ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ನಾರಾಯಣಸ್ವಾಮಿ ಜಿ. ಮಾತನಾಡಿ, ಪ್ರತಿದಿನ ಕಾನೂನು ಬದಲಾವಣೆಗಳು ನಡೆಯುತ್ತಿರುತ್ತವೆ, ವಕೀಲರಿಗೂ ಹಾಗೂ ನ್ಯಾಯಾಧೀಶರಿಗೂ ಜ್ಞಾನದ ಅವಶ್ಯಕತೆ ಇದೆ, ಆದ್ದರಿಂದ ಜ್ಞಾನವನ್ನು ಪಡೆದುಕೊಳ್ಳಬೇಕು, ವಕೀಲರಿಗೆ ಕೊನೆಯವರೆಗೂ ಕಲಿಯುವುದು ನಿಲ್ಲುವುದಿಲ್ಲ, ಯುವ ವಕೀಲರಿಗೆ ಅವಕಾಶಗಳು ಸಿಗುತ್ತಿಲ್ಲ. ಅವಕಾಶಗಳನ್ನು ನೀಡುವ ಕಾರ್ಯವಾಗಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎ.ಪಿ. ಕುಲಕರ್ಣಿ ಮಾತನಾಡಿ, ಜಮಖಂಡಿ ವಕೀಲರ ಸಂಘಕ್ಕೆ 150 ವರ್ಷಗಳ ಇತಿಹಾಸವಿದೆ, ಸಂಘ ಹಲವಾರು ಸಾಧಕರನ್ನು ನೀಡಿದೆ, ನಮ್ಮ ಜಿಲ್ಲೆಯಲ್ಲಿ ಸಿವಿಲ್ ನ್ಯಾಯಾಧೀಶರು ಹಾಗೂ ಸರ್ಕಾರಿ ವಕೀಲರು ಹೆಚ್ಚು ಆಯ್ಕೆಯಾಗಬೇಕಾದರೆ ಇಂತಹ ಕಾರ್ಯಾಗಾರದ ಅವಶ್ಯಕತೆ ಇದೆ ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಐ.ಎಂ.ಪಾಟೀಲ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ವೈದ್ಯ ಶ್ರೀಕಾಂತ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಡಿ.ಬಬಲಾದಿ, ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀಕಾಂತ ರವೀಂದ್ರ, ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ, ವಕೀಲರ ಸಂಘದ ಅಧ್ಯಕ್ಷ ಎ.ಪಿ.ಕುಲಕರ್ಣಿ, ಉಪಾಧ್ಯಕ್ಷೆ ವಿ.ಎ.ಭಟ್ಟ, ಕಾರ್ಯದರ್ಶಿ ವೈ.ಕೆ.ಕಡಪಟ್ಟಿ, ಜಂಟಿ ಕಾರ್ಯದರ್ಶಿ ಎಸ್.ಎ.ಅಂಬಿ ಇದ್ದರು.