ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನಶಾಮುಕ್ತ ಭಾರತ ಅಭಿಯಾನದಡಿ ಇತ್ತೀಚಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಾರಾಗೃಹದ ಮುಖ್ಯಸ್ಥ ಡಾ.ಕೆ.ಸುರೇಶ ದೀಪ ಬೆಳಗಿದರು. ಶಿವಲೀಲಾ, ರಾಜೇಶ್ವರಿ, ಶರಣಬಸಪ್ಪ ಹೀರಾ, ರಾಕೇಶ ಕಾಂಬಳೆ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನಶೆಮುಕ್ತ ಅಭಿಯಾನ
ಕಲಬುರಗಿ:ಯುವ ಪೀಳಿಗೆ ದುಶ್ಚಟಗಳಿಂದ ಮುಕ್ತರಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬ್ರಹ್ಮಕುಮಾರಿ ಶಿವಲೀಲಾ ಕರೆ ನೀಡಿದರು.
ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ನಶಾಮುಕ್ತ ಭಾರತ ಅಭಿಯಾನದಡಿ ಬಂದಿಗಳ ಮನ ಪರಿವರ್ತನೆಗಾಗಿ ಆರೋಗ್ಯಕರ ಜೀವನಕ್ಕಾಗಿ ಇತ್ತೀಚಿಗೆ ಆಯೋಜಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯು ವ್ಯಸನಿಗಳಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುವುದರ ಜತೆಗೆ ಆರ್ಥಿಕ ದುರ್ಬಲರಾಗಿ ತಮ್ಮ ಜತೆ ಕುಟುಂಬವನ್ನೂ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿರುವುದು ವಿಷಾದಕರ. ಈ ನಿಟ್ಟಿನಲ್ಲಿ ಯುವಕರು ದುಶ್ಚಟದಿಂದ ದೂರ ಇರುವ ಮೂಲಕ ನೆಮ್ಮದಿ ಬದುಕಿಗೆ ನಾಂದಿ ಹಾಡಬೇಕು ಎಂದು ಹೇಳಿದರು.
ಬ್ರಹ್ಮಕುಮಾರಿ ರಾಜೇಶ್ವರಿ ವ್ಯಸನಮುಕ್ತ ಭಾರತ ಕುರಿತು ಪ್ರತಿೆ ಬೋಧಿಸಿ, ನಶಾ ಮುಕ್ತ ಮತ್ತು ಸದೃಢ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು ಕರೆ ನೀಡಿದರು.
ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬಳೆ ಮಾತನಾಡಿ, ಈಗಾಗಲೇ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಬಳಕೆ ಸಂಪೂರ್ಣ ನಿಲ್ಲಿಸಲಾಗಿದ್ದು, ತಾವು ಇದಕ್ಕೆ ಕೈಜೋಡಿಸಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡು ಕಾರಾಗೃಹದಿಂದ ಶ್ರೀ ಬಿಡುಗಡೆ ಹೊಂದಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಮುಖ್ಯಸ್ಥ ಕೆ.ಸುರೇಶ್ ಮಾತನಾಡಿದರು. ಸಂಸ್ಥೆಯ ಸಹಾಯಕ ಅಧೀಕ್ಷಕ ಚನ್ನಪ್ಪ ಯಾಟಗಲ್, ಜಗದೀಶ್ ಪಾಟೀಲ್, ಶರಣಬಸಪ್ಪ ಹೀರಾ ಹಾಗೂ ಸಿಬ್ಬಂದಿ ಇದ್ದರು. ಸಹಾಯಕ ಆಡಳಿತ ಅಧಿಕಾರಿ ಭೀಮಾಶಂಕರ ಡಾಂಗೆ ಸ್ವಾಗತಿಸಿದರು. ಶಿಕ್ಷಕ ನಾಗರಾಜ್ ಮೂಲಗೆ ನಿರೂಪಿಸಿ, ವಂದಿಸಿದರು.