ಎನ್​ಎಸ್​ಎಸ್​ನಿಂದ ನಾಯಕತ್ವ ಗುಣ ಬೆಳವಣಿಗೆ

ಕಲಬುರಗಿ ಎಸ್​.ಬಿ.ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಎನ್​ಎಸ್​ಎಸ್​ ಶಿಬಿರದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ನಂದಗಾಂವ್​, ಪರಮೇಶ್ವರಿ ಪ್ರಭುರಾಜ ಅಪ್ಪ, ಡಾ.ವಿಜಯಲಕ್ಷ್ಮೀ, ಶರಣಗೌಡ ಪಾಟೀಲ್​, ಅನಿಲ್​ ಭರಣಿ, ಸುವರ್ಣ, ಡಾ.ಲಕ್ಷ್ಮೀ ಪುತ್ರ, ಅನಿತಾ ಗೊಬ್ಬುರ್​, ಡಾ.ಮಿಲಿಂದಕುಮಾರ ಸುಳ್ಳದ್​, ಡಾ.ಆರತಿ, ಡಾ.ಪಿಂಕ್ಯಾಯಿನಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶರಣಬಸವೇಶ್ವರ ಕಲಾ ಪದವಿ ಕಾಲೇಜಿನಲ್ಲಿ ಶಿಬಿರ ಆರಂಭ
ಕಲಬುರಗಿ: ಎನ್​ಎಸ್​ಎಸ್​ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ, ನಾಯಕತ್ವ ಗುಣ, ಶಿಸ್ತು ಮತ್ತು  ವ್ಯಕ್ವಿತ್ವ ವಿಕಸನ ಬೆಳೆಸಿಕೊಳ್ಳಲು ಸಾಧ್ಯ ಎಂದು ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ್​ ಹೇಳಿದರು.
ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 2025&26ನೇ ಶೈಕ್ಷಣಿಕ ಸಾಲಿನ  ಎನ್​ಎಸ್​ಎಸ್​ ವಾರ್ಷಿಕ ವಿಶೇಷ ಶಿಬಿರದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.  ನನಗಾಗಿ ಅಲ್ಲ ನಿಮಗಾಗಿ ಎಂಬುದು ಶಿಬಿರದ ಮುಖ್ಯ ಧ್ಯೇಯ. ಈ ಯೋಜನೆ ಮಹಾತ್ಮ ಗಾಂಧಿಜಿಯವರ ಕನಸಿನ ಕೂಸು. ಸ್ವಚ್ಛತೆ, ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ ಬಗ್ಗೆ ತಿಳಿಯುವುದು. ಗ್ರಾಮೀಣ ಜೀವನ ಅರಿತುಕೊಳ್ಳಬಹುದು. ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಪರಮೇಶ್ವರಿ ಪ್ರಭುರಾಜ ಅಪ್ಪ ಉದ್ಘಾಟಿಸಿದರು. ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶರಣಗೌಡ ಪಾಟೀಲ್​, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ್​ ಭರಣಿ ಮಾತನಾಡಿದರು. 
ಮಹಾವಿದ್ಯಾಲಯದ ಎನ್​ಎಸ್​ಎಸ್​ ಸಂಯೋಜನಾಧಿಕಾರಿ ಡಾ.ವಿಜಯಲಕ್ಷಿ$್ಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುವರ್ಣ ನಿರೂಪಿಸಿದರು. ಪ್ರಾಧ್ಯಾಪಕ ಡಾ.ಲಕ್ಷಿ$್ಮಪುತ್ರ ವಂದಿಸಿದರು. ಸಹ ಸಂಯೊಜಕಿ ಅನಿತಾ ಗೊಬ್ಬುರ್​, ಡಾ.ಮಿಲಿಂದಕುಮಾರ ಸುಳ್ಳದ್​, ಪ್ರಾಧ್ಯಾಪಕಿ ಡಾ.ಆರತಿ, ಡಾ.ಪಿಂಕ್ಯಾಯಿನಿ ಮತ್ತು ಶಿಬಿರಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net