ಶ್ರಮಿಕ ವರ್ಗದ ನಾಯಕ Leader

ಶ್ರಮಿಕ ವರ್ಗದ ನಾಯಕ Leader
ಶ್ರಮಿಕ ವರ್ಗದ ನಾಯಕ Leader
Published on
ಮುಳಬಾಗಿಲು: ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಭಾರತದ ಶ್ರಮಿಕ ವರ್ಗದ ಹಕ್ಕುಗಳಿಗಾಗಿ ಹೋರಾಡಿದ ಪ್ರಮುಖ ನಾಯಕರು. ಅವರ ತತ್ವ&ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅದ್ಯಕ್ಷ ಕೆ.ಶಂಕರ್​ ಕೇಸರಿ ಹೇಳಿದರು. Leader
ಮುಳಬಾಗಿಲಿನ ಎಂಎನ್​ಹಳ್ಳಿ ರಸ್ತೆಯ ಅಂಬೇಡ್ಕರ್​ ನಗರ ವೃತ್ತದಲ್ಲಿ ನಿರಂತರ ಶ್ರಮಿಕ ಮತ್ತು ಕಾರ್ಮಿಕರಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್​ 1942-&1946ರವರೆಗೆ ವೈಸರಾಯ್​ ಕಾರ್ಯಕಾರಿ ಪರಿಷತ್ತಿನ ಕಾರ್ಮಿಕ ಸದಸ್ಯರಾಗಿದ್ದಾಗ ದೈನಂದಿನ ಕೆಲಸದ ಅವಧಿಯನ್ನು 12 ಗಂಟೆಗಳಿಂದ 8 ಗಂಟೆಗಳಿಗೆ ಇಳಿಸಿ, ಕನಿಷ್ಠ ವೇತನ ಕಾಯ್ದೆ, ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯ, ಕಾರ್ಮಿಕರ ವಿಮಾ ಯೋಜನೆ , ಮತ್ತು ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯ ಮಾನ್ಯತೆ ನೀಡುವುದರ ಮೂಲಕ ಕಾರ್ಮಿಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net