ಯಾದಗಿರಿ; ಗಾಣಿಗ ಸಮಾಜದ ಹಿರಿಯ ನಾಯಕ, ಮಾಜಿ ಉಪಮುಖ್ಯ ಮಂತ್ರಿ ಲಕ್ಷ÷್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಗಾಣಿಗ ಅಭಿವೃದ್ಧಿ ನಿಗಮಕ್ಕೆ ೫೦೦ ಕೋಟಿ ರೂ.ಅನುದಾನ ನೀಡಬೇಕು ಎಂದು ಅಖಿಲ ಭಾರತ ಗಾಣಿಗ ಸಮಾಜದ ನೂತನ ಅಧ್ಯಕ್ಷ ಸುರೇಶ ಸಜ್ಜನ್ ಒತ್ತಾಯಿಸಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜಿ¯್ಲÁ ಗಾಣಿಗ ಸಮಾಜದಿಂದ ಶನಿವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಜÁತಿಯ ಒಳಪಂಗಡದಲ್ಲಿರುವ ಗಾಣಿಗ ಸಮಾಜದ ಜನಸಂಖ್ಯೆ ಹೆಚ್ಚು ಇದ್ದು, ಇದರಲ್ಲಿ ಕಡು ಬಡವರು ಕೂಡ ಇದ್ದಾರೆ ಎಂದರು.
ಕೂಡಲೇ ನಿಗಮಕ್ಕೆ ಸಿಎಂ ಅವರು ಅನುದಾನ ನೀಡಬೇಕು. ಜಿ¯್ಲೆಯ ಅರ್ಹ ಕುಟುಂಬಗಳಿಗೆ ಆರ್ಥಿಕ ಸಹಕಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿ, ಇದರಿಂದಲ್ಲೇ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಜಿಲ್ಲಾ ಕೇಂದ್ರದಲ್ಲಿ ಸಮಾಜದ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ನಿವೇಶನ ಮತ್ತು ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಶಾಸಕರಲ್ಲಿ ಸಜ್ಜನ್ ಮನವಿ ಮಾಡಿದರು. ಸಾನ್ನಿಧ್ಯ ವಹಿಸಿದ ಗುರುಮಿಠಕಲï ಖಾಸಾಮಠದ ಪೀಠಾಽಪತಿ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿ ದೇಶದಲ್ಲಿ ಗಾಣಿಗ ಸಮಾಜಕ್ಕೆ ಭವ್ಯ ಇತಿಹಾಸವಿದೆ. ಸುರೇಶ ಸಜ್ಜನ್ ಅವರು ಕ್ರಿಯಾಶೀಲ ವ್ಯಕ್ತಿಯಾಗಿz್ದÁರೆ. ಬರುವ ದಿನಗಳಲ್ಲಿ ಸಮಾಜಕ್ಕೆ ಹೊಸ ಕಾಯಕಲ್ಪ ನೀಡುತ್ತಾರೆ ಎಂದು ನುಡಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಬ್ಬೆತುಮಕೂರಿನ ಕಿರಿಯ ಶ್ರೀಗಳಾದ ಶಿವಶೇಖರ ವಿಶ್ವಾರಾಧ್ಯ ಸ್ವಾಮೀಜಿ, ಸೈದಾಪುರದ ಸಿದ್ಧಾರೂಡ ಮಠದ ಸೋಮೇಶ್ವರನಂದ ಸ್ವಾಮೀಜಿ, ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಹಾಗೂ ಶರಣಪ್ಪ ಮಾನೇಗಾರ್, ನಾಗರತ್ನ ಕುಪ್ಪಿ, ಮಹೇಶರೆಡ್ಡಿ ಮುದ್ನಾಳ, ಜಿ¯್ಲÁ ವೀರಶೈವ ಲಿಂಗಾಯತ ಸಮಾಜದ ಜಿ¯್ಲÁಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಶಂಕ್ರಪ್ಪ ಸಜ್ಜನ್, ರಾಜಶೇಖರ ಚಾಮನಳ್ಳಿ, ಚಂದ್ರಶೇಖರ ವಜ್ಜಲï, ನಾಗಪ್ಪ ಯಲಗಟ್ಟಿ, ಇತರರಿದ್ದರು. ಮಡಿವಾಳಪ್ಪ ಹೆಗ್ಗಣದೊಡ್ಡಿ ಪ್ರಾಸ್ತಾವಿಕ ಮಾತನಾಡಿದರು. ವೀರೇಶ ಸಜ್ಜನ್ ಕಡೇಚೂರ ಸ್ವಾಗತಿಸಿದರು. ಗಾಜಲಿಂಗಪ್ಪ ಸಜ್ಜನ್ ಗಾಜರಕೋಟ್ ಪ್ರಾಥೀಸಿದರು. ಅಮರಯ್ಯ ಸ್ವಾಮಿ ಜÁಲಿಬೆಂಚಿ ನಿರೂಪಿಸಿ. ವಂದಿಸಿದರು.
ನಿವೇಶನ ನೀಡುವ ಭರವಸೆ
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಮಾತನಾಡಿ, ಗಾಣಿಗ ಸಮಾಜದ ಜನರು ಸೂಕ್ಷ÷್ಮಹಾಗೂ ಸ್ನೇಹ ಜೀವಿಗಳು, ಅವರು ದೈವದತ್ತವಾಗಿ ಬಂದಿರುವ ಉದ್ಯೋಗಗಳಲ್ಲಿ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮೂಲಕ ಎಲ್ಲರೊಂದಿಗೆ ಸಮಭಾವದಿಂದ ಜೀವನ ನಡೆಸಿಕೊಂಡು ಬಂದಿz್ದÁರೆ. ಅವರ ಮನವಿಯಂತೆ ಬರುವ ದಿನಗಳಲ್ಲಿ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
"
ಮುಂಬರುವ ದಿನಗಳಲ್ಲಿ ಕ್ರಿಯಾಶೀಲ ತಂಡ ರಚನೆ ಮಾಡಿ ರಾಜ್ಯದ ಎಲ್ಲ ಜಿ¯್ಲÉಗಳಿಗೆ ಪ್ರವಾಸ ಕೈಗೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಜಿ¯್ಲÉಯ ಗಾಣಿಗ ಸಮಾಜದ ಪ್ರತಿಯೊಂದು ಕುಟುಂಬಕ್ಕೆ ೧ ಡಿಜಿಟಲï ಕಾರ್ಡ್ ವಿತರಿಸಲು ಚಿಂತನೆ ನಡೆದಿದೆ. | ಸುರೇಶ ಸಜ್ಜನ್ಅಧ್ಯಕ್ಷ ಗಾಣಿಗ ಸಮಾಜ ಯಾದಗಿರಿ