

ಪ್ರಮುಖ ಮುಖ್ಯಾಂಶಗಳು
ತೆರಿಗೆ ವಸೂಲಿಗೆ ಮೊದಲ ಆದ್ಯತೆ
ಬಿಪಿಎಲ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಯು 1997 ಮತ್ತು 1998ರಲ್ಲಿ ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದು ತನ್ನ ಆಸ್ತಿಗಳನ್ನು ಅಡಮಾನ ಇಟ್ಟಿತ್ತು. ಸುಮಾರು 70 ಕೋಟಿ ರೂ. ಗೂ ಅಧಿಕ ವಾಣಿಜ್ಯ ತೆರಿಗೆ ಬಾಕಿ ಬಗ್ಗೆ ಅಂದಿನ ಆಂಧ್ರಪ್ರದೇಶ ಸರ್ಕಾರ 2007 ಮತ್ತು 2011ರಲ್ಲಿ ನೋಟಿಸ್ ನೀಡಿ, ಕಂಪನಿಯ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಈ ಕಂಪನಿಯು 2012ರಲ್ಲಿ ದಿವಾಳಿ ಎಂದು ಘೋಷಿಸಲ್ಪಟ್ಟಿತ್ತು. ಇದಾದ ನಂತರ ಸಾಲದಾತರಾಗಿದ್ದ ಓಂಕಾರ ಅಸೆಟ್ಸ್ ರೀಕನ್ಸ್ಟ್ರಕ್ಷನ್ ಕಂಪನಿಯು ಸರ್ಕಾರ ಜಪ್ತಿ ಮಾಡಿರುವ ಆಸ್ತಿಯಲ್ಲಿ ತಮಗೂ ಪಾಲಿದೆ ಎಂದು ವಾದಿಸಿತ್ತು. ಇಂದಿನ ತೆಲಂಗಾಣ ವಾಣಿಜ್ಯ ತೆರಿಗೆ ಇಲಾಖೆಯ ವ್ಯಾಪ್ತಿಗೆ ಬರುವ ಜಪ್ತಿ ಆದೇಶವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ತೀರ್ಪು ನೀಡುವ ವೇಳೆ ಕಾನೂನು ಸುಧಾರಣೆ ಬಗ್ಗೆ ಹೈಕೋರ್ಟ್ ಅವಲೋಕನ ಮಾಡಿದೆ. ಸಾಲದಾತರ ಹಕ್ಕುಗಳಿಗಿಂತ ತೆರಿಗೆ ವಸೂಲಿ ಮಾಡುವ ಸರ್ಕಾರದ ಹಕ್ಕಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.