ಕಿತ್ತನಹಳ್ಳಿಯಲ್ಲಿ ಲಕ್ಷ ದೀಪೋತ್ಸವ ಅದ್ಧೂರಿ / NELAMANGAL

ಬೆಂಗಳೂರು ಉತ್ತರ ತಾಲೂಕಿನ ಕಿತ್ತನಹಳ್ಳಿಯ ಚಾಮುಂಡೇಶ್ವರಿ ಹಾಗೂ ದುಗ್ಲಮ್ಮ ಉತ್ಸವದಲ್ಲಿ ಶಿವಸೇನೆ ಟ್ರಸ್ಟ್​ ಅಧ್ಯಕ್ಷ ಶಿವಶಂಕರ್​, ಖಜಾಂಚಿ ನಾಗರಾಜು, ಸದಸ್ಯರಾದ ಹೊನ್ನಯ್ಯ, ಶಂಕರ್​, ಕಾರ್ತಿಕ್​, ಕುಮಾರ್​, ನವೀನ್​, ಹರೀಶ್​, ಶಿವರಾಜ್​ ದೇವರಾಜು, ನಾಗರಾಜು, ನಾಗೇಶ್​, ಭರತ್​, ಪ್ರಸಾದ್​, ಮಂಜುನಾಥಯ್ಯ, ವಕೀಲ ಚಂದ್ರಶೇಖರ್​ ಇತರರಿದ್ದರು.

Published on
ನೆಲಮಂಗಲ : ಕಾರ್ತಿಕ ಮಾಸ ಪ್ರಯುಕ್ತ ಚಾಮುಂಡೇಶ್ವರಿ ಹಾಗೂ ದುಗ್ಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಕಿತ್ತನಹಳ್ಳಿಯ ಶಕ್ತಿ ದೇವತೆ ಚಾಮುಂಡೇಶ್ವರಿ ಹಾಗೂ ದುಗ್ಲಮ್ಮ ದೇವಾಲಯದಲ್ಲಿ ಶಿವಸೇನೆ ಟ್ರಸ್ಟ್​ನಿಂದ ಕಾರ್ತಿಕ ಮಾಸದ ಪ್ರಾರಂಭದಿಂದಲೂ ವಿಶೇಷ ಪೂಜೆ ನಡೆದವು.
ಶನಿವಾರ ಸಂಜೆ 2ನೇ ವರ್ಷದ ಅದ್ದೂರಿ ಮೆರವಣಿಗೆ ಹಾಗೂ ಲಕ್ಷ ದೀಪೋತ್ಸವ ನಡೆಯಿತು. ದೇವಾಲಯ ಹಾಗೂ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಅಭಿಷೇಕ ನಡೆಯಿತು. ಸಂಜೆ ದೇವಾಲಯದಲ್ಲಿ ಒಂದು ಲಕ್ಷ ಮಣ್ಣಿನ ಹಣತೆ ಹಾಗೂ ವಿದ್ಯುತ್​ ದೀಪಗಳನ್ನು ಬೆಳಗಿಸಲಾಯಿತು. ಕಿತ್ತನಹಳ್ಳಿ, ಗಿಡೇನಹಳ್ಳಿ ಹಾಗೂ ಬೆಟ್ಟಹಳ್ಳಿ ಸೇರಿ ಸುತ್ತಮುತ್ತಲಿನ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಜನ ಮಣ್ಣಿನ ದೀಪಗಳನ್ನು ಬೆಳಗಿದರು. ಮುಖಂಡರಾದ ಕೋಟೆಪ್ಪ, ಪಟೇಲ್​ಪ್ರಕಾಶ್​, ಮುದ್ದಪ್ಪ, ಸಿ.ನಾಗರಾಜಯ್ಯ, ಆನಂದ್​, ನಾಗರಾಜು, ರಮೇಶ್​, ಕುಮಾರ್​, ಬೀರೇಶ್​, ಸುರೇಶ್​, ರುದ್ರಸ್ವಾಮಿ ಉಪಸ್ಥಿತರಿದ್ದರು.

ಕಳೆದ 2 ವರ್ಷ ದಿಂದ ಗ್ರಾಮದಲ್ಲಿ ಎಲ್ಲರ ಸಹಕಾರದಿಂದ ಲಕ್ಷದಿಪೋತ್ಸವ ನಡೆಸಲಾಗುತ್ತಿದೆ. ಸುಮಾರು ನಾಲ್ಕೈದು ಸಾವಿರ ಮಂದಿ ದೀಪೋತ್ಸವದಲ್ಲಿ ಭಾಗವಹಿಸಿದ್ದು ಟ್ರಸ್ಟ್​ ಹಾಗೂ ಗ್ರಾಮಸ್ಥರ ಸಹಕಾರದಿಂದ ಸಕಲ ಸಿದ್ಧತೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net