ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ಬೇಸರ
ಅಂಬೇಡ್ಕರ್ ಸೇವಾ ಸಮಿತಿಯಿಂದ ಮನೆ ಹಸ್ತಾಂತರ
ಮಾಸ್ತಿ: ಅಸಹಾಯಕರು ಹಾಗೂ ನಿರ್ಗತಿಕರ ಸಬಲೀಕರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸಹ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ಸದುಪಯೋಗವಾಗದೆ ಇರುವುದು ದುರ್ದೈವ ಎಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ಬೇಸರ ವ್ಯಕ್ತಪಡಿಸಿದರು. officials
ಮಾಲೂರು ತಾಲೂಕು ಮಾಸ್ತಿ ಗ್ರಾಪಂ ವ್ಯಾಪ್ತಿಯ ಕೆಸರಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯಿಂದ ಜಿಲ್ಲಾಧ್ಯಕ್ಷ ಕಾಂತರಾಜ್ ಅವರ ನೇತೃತ್ವದಲ್ಲಿ ವೃದ್ಧೆ ಲಕ್ಷ$್ಮಮ್ಮ ಅವರಿಗೆ ನೂತನ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಇಷ್ಟೇಲ್ಲಾ ವರ್ಷ ಕಳೆದರೂ ಸಹ ಇಂದಿಗೂ ಹಲವು ಕುಟುಂಬಗಳು ಕಷ್ಟದಲ್ಲೇ ಜೀವನ ಸಾಗಿಸುತ್ತಿವೆ. ಆಡಳಿತ ವ್ಯವಸ್ಥೆಯ ಇಂತಹ ಧೋರಣೆಗಳನ್ನು ನಮ್ಮ ಸಂಘಟನೆ ಧಿಕ್ಕರಿಸುವ ಜತೆಗೆ ನಿರ್ಗತಿಕರಿಗೆ ಸೂರು ಕಲ್ಪಿಸುವ ಕಾರ್ಯಕ್ಕೆ ಸ್ವತ@ ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಈಗಾಗಲೇ ಸೂರು ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಇತ್ತಿಚೇಗೆ ಹೋಬಳಿಯ ನಿಡುಮಾಕನಹಳ್ಳಿಯ ವೆಂಕಟಮ್ಮ ಅವರಿಗೆ ಮೊದಲ ಸೂರು ಭಾಗ್ಯ ಕಲ್ಪಿಸಲಾಗಿತ್ತು. ಪ್ರಸ್ತುತ ಕೆಸರೆಗೆರೆಯ ದೋಬಿ ಸಮುದಾಯದ ಅಂಗವಿಕಲ ವೃದ್ಧೆಯನ್ನು ಗಮನಿಸಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಕಾಂತರಾಜ್ ಮಾತನಾಡಿ, ಸಂಘಟನೆಯಿಂದ ಎಎಸ್ಎಸ್ಕೆ ನಡಿಗೆ ಮನೆ ಮನೆ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ ಗ್ರಾಮಗಳಲ್ಲಿನ ವಾಸ್ತವ ಸ್ಥಿತಿ ಅರಿವಿಗೆ ಬಂದಿತು. ಶೋಚನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳ ಜತೆ ನಿಲ್ಲುವ ಉದ್ದೇಶದಿಂದ ಸೂರಿನ ಭಾಗ್ಯ ಕಲ್ಪಿಸಿದ್ದೇವೆ ಎಂದರು.