ಕುವೆಂಪು ವಿವಿ ಅನುದಾನ ದುರುಪಯೋಗ:: ತನಿಖೆಗೆ ರಾಜ್ಯಪಾಲರ ಆದೇಶ

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಂಜನ್ ನೇತೃತ್ವದ ಸತ್ಯಶೋಧನಾ ಸಮಿತಿ ರಚಿಸಿ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಆದೇಶ
  • ಸಂಶೋಧನಾ ವಿದ್ಯಾರ್ಥಿಗಳ (ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ) ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳಿಗಾಗಿ ಬಿಡುಗಡೆ ಮಾಡಲಾದ ಅನುದಾನದ ದುರುಪಯೋಗ
  • 2023ರ ಏ.6ರ ಅವಧಿಯಲ್ಲಿ 4.25 ಕೋಟಿ ರೂ.ಗಳನ್ನು ಕುವೆಂಪು ವಿವಿ ಕುಲಪತಿಗಲಿಗೆ ವರ್ಗಾಯಿಸಿದ್ದರು. ಈ ಅನುದಾನ ದುರುಪಯೋಗವಾಗಿದೆ ಎಂಬ ಆರೋಪವಿದೆ.
ಬೆಂಗಳೂರು: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗಿರುವ ಎಸ್‌ಸಿಪಿ/ಟಿಎಸ್‌ಪಿ ಅನುದಾನ ದುರುಪಯೋಗದ ತನಿಖೆ ನಡೆಸಿ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಂಜನ್ ನೇತೃತ್ವದ ಸತ್ಯಶೋಧನಾ ಸಮಿತಿ ರಚಿಸಿ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಆದೇಶ ಹೊರಡಿಸಿದ್ದಾರೆ.
ವಿಸ್ತೃತ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ.
ಸಂಶೋಧನಾ ವಿದ್ಯಾರ್ಥಿಗಳ (ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ) ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳಿಗಾಗಿ ಬಿಡುಗಡೆ ಮಾಡಲಾದ ಅನುದಾನದ ದುರುಪಯೋಗ ಮತ್ತು ದುರುಪಯೋಗದ ಕುರಿತಾದ ದೂರುಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು.
ಕಿಯೋನಿಕ್ಸ್‌ಗೆ ಅನುಮೋದನೆ, ಪೂರೈಕೆ ಆದೇಶಗಳು ಮತ್ತು ಪಾವತಿಗಳಲ್ಲಿ ಕರ್ನಾಟಕ ಸಾರ್ವಕನಿಕ ಸಂಗ್ರಹಣೆಗಳನ್ನು ಪಾರದರ್ಶಕತೆ ಕಾಯ್ದೆಯ ಉಲ್ಲಂಘನೆಗಳನ್ನು ಪರಿಶೀಲಿಸಬೇಕು.
ನಿರ್ಲಕ್ಷ್ಯ, ಸಮಗ್ರತೆಯ ಕೊರತೆ ಮತ್ತು ವಿಶ್ವವಿದ್ಯಾಲಯಗಳ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಲತೆಗಾಗಿ ಅಧಿಕಾರಿಗಳ (ಪ್ರೊ. ಬಿ.ಪಿ. ವೀರಭದ್ರಪ್ಪ, ಪ್ರೊ. ಗೀತಾ ಸಿ., ಡಾ. ವೈ.ಎಲ್. ರಾಮಚಂದ್ರ ಮತ್ತು ಶಂಕರಪ್ಪ ಬಿ. ಅವರಿಗೆ ಸಾಮಾಹಿಕ ಜವಾಬ್ದಾರಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

4.25 ಕೋಟಿ ರೂ. ಬಿಡುಗಡೆಯಾಗಿತ್ತು:

2022ರಲ್ಲಿ ಸರ್ಕಾರವು ಸ್ಮಾರ್ಟ್ ಕ್ಲಾಸ್ ತರಗತಿಗತಿಗಾಗಿ 5 ಕೋಟಿ ರೂ.ಗಳನ್ನು ೋಷಿಸಿತ್ತು. ಅದರಂತೆ ಸಮಾಜಕಲ್ಯಾಣ ಇಲಾಖೆ ಆಯುಕ್ತರು 2022ರ ೆ.23ರಿಂದ 2023ರ ಏ.6ರ ಅವಧಿಯಲ್ಲಿ 4.25 ಕೋಟಿ ರೂ.ಗಳನ್ನು ಕುವೆಂಪು ವಿವಿ ಕುಲಪತಿಗಲಿಗೆ ವರ್ಗಾಯಿಸಿದ್ದರು. ಈ ಅನುದಾನ ದುರುಪಯೋಗವಾಗಿದೆ ಎಂಬ ಆರೋಪವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net