ಸ್ಟ್ರೆಚರ್​ನಲ್ಲಿ ಮಲಗಿ ಪರೀಕ್ಷೆ ಬರೆದ ಕುಸುಮಾ ಫಸ್ಟ್​ ಕ್ಲಾಸ್ Kusuma

ಸ್ಟ್ರೆಚರ್​ನಲ್ಲಿ ಮಲಗಿ ಪರೀಕ್ಷೆ ಬರೆದ ಕುಸುಮಾ ಫಸ್ಟ್​ ಕ್ಲಾಸ್ Kusuma
ಸ್ಟ್ರೆಚರ್​ನಲ್ಲಿ ಮಲಗಿ ಪರೀಕ್ಷೆ ಬರೆದ ಕುಸುಮಾ ಫಸ್ಟ್​ ಕ್ಲಾಸ್ Kusuma
Published on
ಕೆಜಿಫ್: ಅಪಘಾತದಲ್ಲಿ ಕಾಲು ಕಳೆದುಕೊಂಡು ಸ್ಟ್ರೆಚರ್​ ಮೇಲೆ ಎಸ್ಸೆಸ್ಸೆಲ್ಸಿ ಪರೀೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಉತ್ತಮ ಸಾಧನೆ ಮಾಡಿದ್ದು, ಮತ್ತೊಮ್ಮೆ ರಾಜ್ಯದ ಗಮನ ಸೆಳೆದಿದ್ದಾರೆ.Kusuma
ಜಿಲ್ಲೆಯ ಕೆಜಿ​ಫ್ ತಾಲೂಕಿನ ಚಿನ್ನನಾಗಹಳ್ಳಿ ನಿವಾಸಿ ಕುಸುಮಾ ಸೇಂಟ್​ ಮೇರಿಸ್​ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಪರೀೆಯಲ್ಲಿ 625ಕ್ಕೆ 374 ಅಂಕಗಳಿಸುವ ಮೂಲಕ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಕನ್ನಡದಲ್ಲಿ 72, ಇಂಗ್ಲಿಷ್​ 62, ಹಿಂದಿ 63, ಗಣಿತ 67, ವಿಜ್ಞಾನ 54 ಸಮಾಜ ವಿಜ್ಞಾನದಲ್ಲಿ 56 ಒಟ್ಟು 374 ಅಂಕಗಳಿಸಿದ್ದಾರೆ.
ಪರೀೆ ಎರಡು ದಿನ ಇರುವಾಗ ಮಾರ್ಚ್​ 16ರಂದು ಕುಸುಮಾ ಅನ್ಯ ಕಾರ್ಯ ನಿಮಿತ್ತ ಗ್ರಾಮದಿಂದ ಪಾಲಕರರೊಂದಿಗೆ ಕೆಜಿಎ್​ಗೆ ಬಂದು ಮನೆಗೆ ತೆರಳಬೇಕಾದರೆ ದ್ವಿಚಕ್ರವಾಹನಕ್ಕೆ ಟ್ರಾ$್ಯಕ್ಟರ್​ ಡಿಕ್ಕಿ ಹೊಡೆದ ಪರಿಣಾಮ ಕಾಲು ಸಹ ಕಳೆದುಕೊಂಡಿದ್ದಾರೆ. ಪರೀೆಗೆ ಎರಡು ದಿನ ಬಾಕಿದ್ದಾಗ ಈ ರೀತಿ ಆಗಿದ್ದಕ್ಕೆ ಪಾಲಕರಲ್ಲಿ ಆತಂಕ ಮೂಡಿಸಿತ್ತು.
ಚಿಕಿತ್ಸೆ ಚಾಲ್ತಿಯಲ್ಲಿದ್ದಾಗಲೂ ಕುಸುಮಾ ಆಂಬುಲೆನ್ಸ್​ ಮೂಲಕ ಸೇಂಟ್​ ಅನ್ಸ್​ ಪ್ರೌಢ ಶಾಲೆ ಕೇಂದ್ರಕ್ಕೆ ಬಂದು ಸ್ಟ್ರೆಚರ್​ ಮೇಲೆಯೇ ಪರೀೆಗೆ ಉತ್ತರಿಸಿದ್ದರು. ಕುಸುಮಾ ಉತ್ತರ ಹೇಳಿದರೆ ಮತ್ತೊಬ್ಬರು ಪರೀೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಈಗ ಕುಸುಮಾ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಎಲ್ಲರ ಪ್ರಶಂಶೆಗೆ ಪಾತ್ರರಾಗಿದ್ದಾರೆ.
ಸದ್ಯ, ವಿದ್ಯಾರ್ಥಿನಿ ಬೆಂಗಳೂರಿನ ವೈಟ್​ ಫೀಲ್ಡ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಸುಮಾಳ ಅಂದಿನ ಪರಿಸ್ಥಿತಿಯಲ್ಲಿ ಯಾರೇ ಆಗಿದ್ದರೂ ಶಿಕ್ಷಣ ನಿಲ್ಲಿಸಿ ಬಿಡಬೇಕಾಗಿತ್ತು ಅಥವಾ ಮುಂದಿನ ವರ್ಷ ಪರೀಕ್ಷೆ ಬರೆಯುತ್ತೇನೆ ಎಂದು ತೀಮಾರ್ನ ತೆಗೆದುಕೊಳ್ಳಬಹುದಿತ್ತು. ಆದರೂ ಆಕೆ ಹಠ ಹಿಡಿದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಗಟ್ಟಿ ನಿರ್ಧಾರ ತೆಗೆದುಕೊಂಡರು, ಆಂಬುಲೆನ್ಸ್​ನಲ್ಲಿ ಬಂದು ಸ್ಟ್ರೆಚರ್​ ಮೇಲೆ ಮಲಗಿಕೊಂಡು ಪರೀಕ್ಷೆ ಎದುರಿಸಿದ್ದರು. ಈ ವೇಳೆ ಕುಸುಮಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ಸುರೇಶ್​ ಕುಮಾರ್​, ಶಾಸಕಿ ರೂಪಕಲಾ ಅವರು ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಜತೆಗೆ ಚಿಕಿತ್ಸೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಇದೇ ಆತ್ಮಸ್ಥೆ$ರ್ಯವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಪೊಲೀಸ್​ ವರಿಷ್ಠಾಧಿಕಾರಿ ಶಿವಾಂಶು ರಜಪೂತ್​ ಸಹ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net