ಕೃಷ್ಣಾ ನದಿ ನೀರು ಹೆಚ್ಚಳ

ಮಹಾ ಮಳೆಯಿಂದ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ
ಮಹಾ ಮಳೆಯಿಂದ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ
  • ಮಹಾ ಮಳೆಗೆ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ
  • ಕೃಷ್ಣಾ ನದಿ ಪಾತ್ರದಲ್ಲಿ ಕಟ್ಟೆಚ್ಚರ
  • ಚಿಕ್ಕೋಡಿ, ರಾಯಬಾಗ,ಅಥಣಿ ಜನರಲ್ಲಿ ಆತಂಕ
ಮಹಾ ಮಳೆಯಿಂದ ಹೆಚ್ಚಿದ ಕೃಷ್ಣಾ ನದಿ ನೀರು
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಮಹಾರಾಷ್ಟçದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಮಹಾರಾಷ್ಟçದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನಲೆ ಸಾತಾರ ಜಿಲ್ಲೆಯ ಕೊಯ್ನಾ ಜಲಾಶಯ ಭರ್ತಿ ಹಂತ ತಲುಪಿದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ. ರಾಜಾಪೂರ ಬ್ಯಾರೇಜ್ ಮೂಲಕ 1 ಲಕ್ಷ ಕ್ಯೂಸೆಕ್ ಅಧಿಕ ನೀರು ಹಾಗೂ ವೇದಗಂಗಾ,ದೂಧಗಆಗಾ ನದಿಗಳ ನೀರು ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಸೋಮವಾರ 1.35 ಲಕ್ಷ ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.
ಮುಳುಗಿದ 9 ತಿಂಗಳ ಕೆಳ ಸೇತುವೆ:
ಕಳೆದ ಒಂದು ತಿಂಗಳಿನಲ್ಲಿ ಕೃಷ್ಣಾ ,ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟ ಏರಿಳಿತದಿಂದ ಮೂರನೇ ಬಾರಿ ಚಿಕ್ಕೋಡಿ ಉಪ ವಿಭಾಗ 9 ಕೆಳ ಹಂತ ಸೇತುವೆಗಳು ಮುಳುಗಡೆಯಾಗಿವೆ. ನಿಪ್ಪಾಣಿ ತಾಲ್ಲೂಕಿನ ೬, ಚಿಕ್ಕೋಡಿ ತಾಲ್ಲೂಕಿನ ೨ ಮತ್ತು ರಾಯಬಾಗ ತಾಲ್ಲೂಕಿನ ೧ ಕೆಳ ಹಂತದ ಸೇತುವೆ ಜಲಾವೃತಗೊಂಡಿದ್ದರಿ. ಮಾರ್ಗವಾಗಿ ಸಂಚರಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net